ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಸಾಮೂಹಿಕ ಸಂಕಲ್ಪದ ನಿರ್ಧಾರ ವಿರೋಧಿಸಿ

0

ಅ.29ರಂದು ಪತ್ಯೇಕ ಸಂಕಲ್ಪದ ಹೋರಾಟಕ್ಕಾಗಿ ಸಭೆ

ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಪೂಜೆ ಮತ್ತು ನಾಗ ಪ್ರತಿಷ್ಠೆಗೆ ಸಾಮೂಹಿಕ ಸಂಕಲ್ಪ ದ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸಿ
ಹೋರಾಟದ ಪೂರ್ವಭಾವಿ ಸಭೆಯನ್ನು ಅ. 29 ಬೆಳಿಗ್ಗೆ ಸಮಯಕ್ಕೆ ಸರಿಯಾಗಿ 10.30 ಕ್ಕೆ ಸುಬ್ರಹ್ಮಣ್ಯ ದ ಐನೆಕಿದು ಸೊಸೈಟಿ ಬಳಿ ಕರೆಯಲಾಗಿದೆ. ಭಕ್ತರು ಭಾಗವಹಿಸುವಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಕಿಶೋರ್ ಶಿರಾಡಿ ಮತ್ತು ಜಯಪ್ರಕಾಶ್ ಕೂಜುಗೋಡು ವಿನಂತಿಸಿದ್ದಾರೆ