ಸುಳ್ಯದ ಸಿಂಧೂರ ಶೋ ರೂಂ ವಿಸ್ತೃತ ಮಳಿಗೆ ಲೋಕಾರ್ಪಣೆ:ಎರಡು ಕೊಂಡರೆ ಒಂದು ಉಚಿತ ಯೋಜನೆಗೆ ಚಾಲನೆ

0

ಸಿಂಧೂರ ವಸ್ತ್ರ ಮಳಿಗೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ : ದೇವದಾಸ್ ಕಾಪಿಕಾಡ್

ಮೊದಲು ಬಂದ 300 ಗ್ರಾಹಕರಿಗೆ ಉಚಿತ ಕೊಡುಗೆ

“ಸುಳ್ಯದಲ್ಲಿ ಜನರಿಗೆ ನಗುಮುಖದೊಂದಿಗೆ ಉತ್ತಮ ಸೇವೆ ನೀಡುವ ಸಿಂಧೂರ ಶೋ ರೂಂ ವಸ್ತ್ರ ಮಳಿಗೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ. ಜನರಿಗೆ ಇದೇ ರೀತಿ ಕಡಿಮೆ ಬೆಲೆಯಲ್ಲಿ ಬಟ್ಟೆಗಳು ಸಿಗುತ್ತಿರಲಿ” ಎಂದು ಚಿತ್ರ ನಟ, ತುಳುವ ಬೊಳ್ಳಿ ದೇವದಾಸ್ ಕಾಪಿಕಾಡ್ ಹೇಳಿದ್ದಾರೆ.

ಅ.27 ರಂದು‌ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಎದುರಿನ ಸ್ಕಂದ ಕಾಂಪ್ಲೆಕ್ಸ್ ನಲ್ಲಿರುವ ಸಿಂಧೂರ ಶೋ ರೂಂ ನ ವಿಸ್ತೃತ ಮಳಿಗೆಯನ್ನು ಉದ್ಘಾಟಿಸಿ ಅವರು ಶುಭಹಾರೈಸಿದರು.

“ಸಿಂಧೂರ ಸಂಸ್ಥೆಗೆ ಬರುವಾಗ ಮಾಲಕರ ಹಾಗೂ ಸಿಬ್ಬಂದಿಗಳ ನಗುಮುಖದ ಸ್ವಾಗತದ ಮೂಲಕ ಬರುವ ಗ್ರಾಹಕರಿಗೆ ಪಾಸಿಟಿವ್ ಎನರ್ಜಿ ಸಿಗುತ್ತದೆ.‌ ಕಡಿಮೆ‌ ಬೆಲೆಗೆ ಉತ್ತಮ ಗುಣ ಮಟ್ಟದ ವಸ್ತ್ರಗಳು ದೊರೆಯುತ್ತದೆ. ಇದು ಹೀಗೆ ಮುಂದುವರಿಯಬೇಕು. ಉದ್ಯಮ ಯಶಸ್ವಿಯಾಗುತ್ತದೆ ಹಾಗೂ ಮಾಲಕರಾದ ಧನ್ ರಾಮ್ ದೊಡ್ಡ ಉದ್ಯಮಿಯಾಗುತ್ತಾರೆ” ಎಂದು‌ ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ತುಳು ಚಿತ್ರ ನಟರಾದ ಭೋಜರಾಜ ವಾಮಂಜೂರು ಹಾಗೂ ಸಾಯಿಕೃ಼ಷ್ಣ ಮಾತನಾಡಿ, “ಒಂದು ಸಂಸ್ಥೆಯ ಮೂಲಕ ಹತ್ತಾರು ಕುಟುಂಬಗಳು ಬದುಕುಕಟ್ಟಿಕೊಳ್ಳುತ್ತಿವೆ. ಸುಳ್ಯದ ಜನರಿಗೆ ಉದ್ಯೋಗ ನೀಡುತ್ತಿರುವ ಸಿಂಧೂರ ಸಂಸ್ಥೆಯನ್ನು ಸುಳ್ಯದವರು ಬೆಳೆಸುತ್ತಾರೆ” ಎಂದು ಹಾರೈಸಿದರು.

ಸಮಾರಂಭದಲ್ಲಿ ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ, ಅಬೂಬಕ್ಕರ್ ಪುತ್ತು ಉಪ್ಪಿನಂಗಡಿಯವರನ್ನು ತುಳುವ ಶಾಲು, ಫಲ ತಾಂಬೂಲ, ಸ್ಮರಣಿಕೆ‌ ನೀಡಿ‌ ಗೌರವಿಸಲಾಯಿತು. ಸಂಸ್ಥೆಯ ಮಾಲಕ ಧನ್ ರಾಮ್ ಪಟೇಲ್ ಗೌರವಿಸಿದರು. ಪತ್ರಕರ್ತ
ಹೇಮಂತ್ ಸಂಪಾಜೆ ಕಾರ್ಯಕ್ರಮ ‌ನಿರೂಪಿಸಿದರು.

300 ಗ್ರಾಹಕರಿಗೆ ಉಚಿತ ಕೊಡುಗೆ : ವಿಸ್ತೃತ ಮಳಿಗೆಯ ಲೋಕಾರ್ಪಣೆ ಪ್ರಯುಕ್ತ ಮೊದಲು ಬಂದ 300 ಗ್ರಾಹಕರಿಗೆ ಬಟ್ಟೆಗಳನ್ನು ಉಚಿತವಾಗಿ‌ ನೀಡಲಾಯಿತು. ಈ ಕೊಡುಗೆಯನ್ನು ಪಡೆಯುವುದಕ್ಕಾಗಿ ಜನರು ಸರತಿಯ ಸಾಲಿನಲ್ಲಿ ಬೆಳಗ್ಗೆ8.30 ರಿಂದಲೇ ಅಂಗಡಿಯ‌ ಮುಂಭಾಗ ಕ್ಯೂ ನಿಂತಿದ್ದರು.

ಎರಡು ಕೊಂಡರೇ ಒಂದು‌ ಉಚಿತ : ದೀಪಾವಳಿ ಸಹಿತ‌ ಮುಂಬರುವ ಸಾಲು ಸಾಲು ಹಬ್ಬಗಳ ಸಂಭ್ರಮಕ್ಕಾಗಿ ಗ್ರಾಹಕರಿಗೆ ಹೊಸ ಯೋಜನೆಯನ್ನು‌ ಇದೇ ಸಂದರ್ಭದಲ್ಲಿ ತರಲಾಯಿತು. ಎರಡು ವಸ್ತ್ರಗಳನ್ನು ಕೊಂಡರೇ ಅದೇ ದುಡ್ಡಿನ ಒಂದು‌‌ಜತೆ ವಸ್ತ್ರವನ್ನು ಉಚಿತವಾಗಿ‌ ನೀಡಲಾಗುತ್ತದೆ. ಜತೆಗೆ 499ರ ಮೇಲಿನ ಖರೀದಿಗೆ ಸ್ಕ್ರಾಚ್ ಕಾರ್ಡ್, 10 ಸಾವಿರ ಕ್ಯಾಸ್ ಬ್ಯಾಕ್‌ ಗೆಲ್ಲುವ ಅವಕಾಶವನ್ನು ಗ್ರಾಹಕರಿಗಾಗಿ ಸಂಸ್ಥೆ‌ ನೀಡುತ್ತಿದೆ.