ಮುರುಳ್ಯ ರಕ್ತೇಶ್ವರಿ ಸಾನಿಧ್ಯ ಭೂಮಿ ವಕ್ಫ್‌ಗೆ ಮಂಜೂರು –  28 ಕ್ಕೆ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ: ಜಗನ್ನಾಥ ಜಯನಗರ

0


ರೈತರು ತಲೆತಲಾಂತರದಿಂದ ಅನುಭವಿಸಿಕೊಂಡು ಬರುತ್ತಿರುವ ಕುಮ್ಕಿ ಜಮೀನನ್ನು ಜಿಲ್ಲಾಧಿಕಾರಿಗಳು ವಾರಸುದಾರರಿಗೆ ನೋಟಿಸ್ ನೀಡದೆ ಅಕ್ರಮವಾಗಿ ವಕ್ಫ್ ಬೋರ್ಡ್‌ಗೆ ಮಂಜೂರು ಮಾಡಲು ಆದೇಶ ಮಾಡಿರುವುದು ಅಕ್ಷಮ್ಯ ಅಪರಾಧ ಮತ್ತು ರೈತರಿಗೆ ಮಾಡಿದ ಘೋರ ಅನ್ಯಾಯವಾಗಿದೆ ಯೆಂದು ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಜಯನಗರ ತಿಳಿಸಿದ್ದಾರೆ

ರೈತರು ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಕುಮ್ಕಿ ಜಮೀನಿಗೆ ಸಂಬಂಧಿಸಿದಂತೆ ಕಾನೂನು ಪ್ರಕಾರ ವಾರಸುದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿತ್ತು. ಆದರೆ ಯಾವುದೇ ನೋಟಿಸ್ ನೀಡದೆ ರಕ್ತೇಶ್ವರಿ ಸಾನಿಧ್ಯ ವಿರುವ ಭೂಮಿಯನ್ನು ಏಕಾಏಕಿ ವಕ್ಫ್ ಬೋರ್ಡ್‌ಗೆ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಇದು ಕಂದಾಯ ಕಾಯ್ದೆ ಉಲ್ಲಂಘನೆಯಾಗಿದ್ದು ತಕ್ಷಣ ಕೈಬಿಡಬೇಕೆಂದು ಜಿ ಜಗನ್ನಾಥ ಜಯನಗರ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ರಕೇಶ್ವರಿ ಸಾನಿಧ್ಯವುಳ್ಳ ಹಿಂದೂಗಳ ಕೃಷಿ ಭೂಮಿಯನ್ನು ವಕ್ಫ್ ಬೋರ್ಡ್ ಮುಸ್ಲಿಂ ದಫನ ಭೂಮಿಯನ್ನಾಗಿ ಅ.28, ಬುಧವಾರ ಬೆಳಿಗ್ಗೆ 10 ಗಂಟೆಗೆ ಹಿಂದೂ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಈ ಹೋರಾಟದಲ್ಲಿ ಎಲ್ಲಾ ಹಿಂದೂ ಬಂಧುಗಳು ಭಾಗವಹಿಸುವಂತೆ ಮನವಿ ಮಾಡಿದ್ದಾರೆ