ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳ ನಿಯಮಿತ, ಶಿವಮೊಗ್ಗ “ಪ್ರಯೋಗ” ಬೆಂಗಳೂರು, ಹಾಗೂ ದಿ ಕ್ಯಾಂಪ್ರೊ (The CAMPCO), ಲಿಮಿಟೆಡ್ ಮಂಗಳೂರು, ಇವರ ಸಹಯೋಗದಲ್ಲಿ
ಅಡಿಕೆಗೆ ಬಾಧಿಸುತ್ತಿರುವ ಸಮಸ್ಯೆಗಳ ಸಮಗ್ರ ಅಧ್ಯಯನ-ಸಂಶೋಧನೆ – ಪರಿಹಾರಗಳ ಅನ್ವೇಷಣೆ ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ಭಾಗದ “ರೈತರೊಂದಿಗೆ ಸಂವಾದ ಕಾರ್ಯಕ್ರಮ”ವು ಅರಂತೋಡುನಲ್ಲಿ ಅ. 27ರಂದು ನಡೆಯಿತು.














ಕ್ಯಾಂಪ್ಕೋ ನಿರ್ದೇಶಕ ತೀರ್ಥರಾಮ ಎ ವಿ, ಸ್ವಾಗತ ಭಾಷಣ ಮಾಡಿದರು. ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತಮೊಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ, ಕ್ಯಾಂಪ್ಕೋ ನಿರ್ದೇಶಕರುಗಳಾದ ತೀರ್ಥರಾಮ ಎ ವಿ, ಗಣೇಶ್, ಶ್ರೀಮತಿ ಮಾಲಿನಿ ಪ್ರಸಾದ್, ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತಮೊಟ್ಟೆ, ಬೆಂಗಳೂರು ವೈಜ್ಞಾನಿಕ ಸಂಶೋಧನಾ ಸಲಹೆಗಾರ ಡಾ. ವಿದ್ಯಾಶಂಕರ್ ಬುರವಲ್ಲ,ಹಿರಿಯ ವಿಜ್ಞಾನಿ ಡಾ.ವೆಂಕಟ ಕೃಷ್ಣ ಬಾಯಿನೇನಿ, ರಮೇಶ ಟಿ ಆರ್. ಯೋಜನಾ ಸಂಯೋಜಕರು ಅಡಿಕೆ ಸಂಶೋಧನೆ ಪ್ರಯೋಗ ಬೆಂಗಳೂರು ಉಪಸ್ಥಿತರಿದ್ದರು. ಕ್ಯಾಂಪ್ಕೋ ಕೃಷಿ ಅಧಿಕಾರಿ ಕೃಷ್ಣ ಎನ್ ಆರ್. ಪ್ರಾಸ್ತಾವಿಕ ಮಾತನಾಡಿದರು.
ಪ್ರಯೋಗ ಸಂಸ್ಥೆಯ ವಿಜ್ಞಾನಿಗಳಿಂದ “ಅಡಿಕೆಗೆ ಬಾಧಿಸುತ್ತಿರುವ ಸಮಸ್ಯೆಗಳ ಸಮಗ್ರ ಅಧ್ಯಯನ ಸಂಶೋಧನೆ, ಪರಿಹಾರಗಳ ಅನ್ನೇಷಣೆ” ಕುರಿತಾಗಿ ಮಾಹಿತಿ ನೀಡಲಾಯಿತು. .ಪ್ರಯೋಗ ಸಂಸ್ಥೆ ವಿಜ್ಞಾನಿಗಳು ಹಾಗೂ ರೈತರ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ರಮೇಶ್ ದೇಲಂಪಾಡಿ, ಉಮಾಶಂಕರ ಅಡ್ಯಡ್ಕ ಕೆ. ಪಿ.ಜಗದೀಶ್, ಪ್ರಶಾಂತ್ ಕಾಪಿಲ, ಶ್ರೀನಿವಾಸ್ ನಿಡಿಂಜಿ, ಅಲ್ತಾಫ್ ಪೆರಾಜೆ ಮೊದಲಾದವರು ಹಳದಿ ರೋಗ ನಿವಾರಣೆ ಬಗ್ಗೆ ವಿಜ್ಞಾನಿ ಜೊತೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಸಂಪಾಜೆ ಸೊಸೈಟಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಮರ್ಕಂಜ ಸೊಸೈಟಿ ಅಧ್ಯಕ್ಷ ದಯಾನಂದ ಪುರ, ಉಬರಡ್ಕ ಸೊಸೈಟಿ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ, ಪೆರಾಜೆ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ, ಸಂಪಾಜೆ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್, ಅರಂತೋಡು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ಅರಂತೋಡು ಸೊಸೈಟಿ ವತಿಯಿಂದ ಸತೀಶ್ಚಂದ್ರರವರನ್ನು ಸನ್ಮಾನಿಸಲಾಯಿತು.
ಕ್ಯಾಂಪ್ಕೋಕೃಷಿ ಅಧಿಕಾರಿ ಕೃಷ್ಣ ಎನ್ ಆರ್. ವಂದಿಸಿದರು.







