ವಿಪ್ರ ಸಮಾವೇಶದಲ್ಲಿ ಶಾಸ್ತ್ರೀಯ ನೃತ್ಯದ ಕುರಿತು ಕಲಾಶ್ರೀ ವಿದುಷಿ ಗೀತಾ ಸರಳಾಯರಿಂದ ಉಪನ್ಯಾಸ

0

ಭಾರತೀಯರ ಅತ್ಯಂತ ಉತ್ಕೃಷ್ಟವಾದ ಕಲೆ ಭರತನಾಟ್ಯ, ಕಲೆಯನ್ನು ವ್ಯಾಪಾರ ದೃಷ್ಟಿಯಿಂದ ಕಾಣಬಾರದು

ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವಿಪ್ರ ಸಮಾವೇಶ ದಲ್ಲಿ ಶಾಸ್ತ್ರೀಯ ನೃತ್ಯದ ಕುರಿತು ಕಲಾಶ್ರೀ ವಿದುಷಿ ಶ್ರೀಮತಿ ಗೀತಾ ಸರಳಾಯ ರವರು ಉಪನ್ಯಾಸ ನೀಡಿದರು.

ಭಾರತ ದೇಶದಲ್ಲಿ ಇರುವ ಭಾರತೀಯರ ಅಚ್ಚು ಮೆಚ್ಚಿನ ಕಲಾ ಪ್ರಕಾರಗಳಲ್ಲಿ ಭರತನಾಟ್ಯ ಕಲೆಯು ಉತ್ಕೃಷ್ಟ ಕಲೆಯಾಗಿದೆ. ಭರತನಾಟ್ಯದಲ್ಲಿ ದೃಶ್ಯ ಮುಖೇನ ರೂಪಕಗಳ ಪ್ರದರ್ಶನದಿಂದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯವಿದೆ. ಕಲೆಯನ್ನು ವ್ಯಾಪಾರ ದೃಷ್ಟಿಯಿಂದ ಕಾಣುವುದು ಸರಿಯಲ್ಲ. ಮುಂದಿನ ಪೀಳಿಗೆಗೆ ಶಿಕ್ಷಣದ ಜತೆ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ಪ್ರೇರಣೆ ನೀಡಬೇಕು. ಭರತನಾಟ್ಯ ಕಲೆಯಿಂದ ದೈಹಿಕವಾಗಿ ಮಾನಸಿಕವಾಗಿ ಮಕ್ಕಳ ಮನಸ್ಸು ಬೆಳವಣಿಗೆಗೆ ಪೂರಕವಾಗುವುದು ಎಂದು ಉಪನ್ಯಾಸ ನೀಡಿದರು.