ಬ್ರಹ್ಮಕಲಶೋತ್ಸವ ಸಮಿತಿ ರಚನೆ
ಗೌರವಾಧ್ಯಕ್ಷ -ಡಾ.ಕೆ.ವಿ.ಚಿದಾನಂದ, ಅಧ್ಯಕ್ಷ- ಕೃಷ್ಣ ಕಾಮತ್ ,ಕಾರ್ಯದರ್ಶಿ- ನಾರಾಯಣ ಕೇಕಡ್ಕ, ಖಜಾಂಜಿ- ಡಾ.ಡಿ.ವಿ.ಲೀಲಾಧರ್
ಸುಳ್ಯದ ಶ್ರೀ ರಾಂ ಪೇಟೆಯಲ್ಲಿ ಇರುವ ಶ್ರೀ ರಾಮ ಭಜನಾ ಮಂದಿರದ ಲ್ಲಿ ಮುಂದಿನ 2024 ರ ಫೆಬ್ರವರಿ ತಿಂಗಳ 25,26,27 ರಂದು ನಡೆಯಲಿರುವ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವ ಭಾವಿ ಸಭೆ ಹಾಗೂ ನೂತನ ಸಮಿತಿಯ ರಚನೆಯು ಡಿ.20 ರಂದು ಭಜನಾ ಮಂದಿರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮಂದಿರದ ಆಡಳಿತ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ರವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಸಮಿತಿ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ರವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೃಷ್ಣ ಕಾಮತ್ ಅರಂಬೂರು, ಕಾರ್ಯದರ್ಶಿ ನಾರಾಯಣ ಕೇಕಡ್ಕ, ಕೋಶಾಧಿಕಾರಿ ಡಾ.ಕೆ.ವಿ.ಲೀಲಾಧರ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಉದ್ಯಮಿ ಎಂ.ಬಿ.ಸದಾಶಿವ, ಮಂದಿರದ ಕಾರ್ಯದರ್ಶಿ ಮಹಾಬಲ ಕೇರ್ಪಳ, ಸದಸ್ಯರಾದ ಶ್ರೀನಿವಾಸ ಸುಳ್ಯ, ಪುರುಷೋತ್ತಮ, ಪ್ರದೀಪ್ ಪ್ರಭು, ಅಶೋಕ ಪ್ರಭು ಸುಳ್ಯ, ಶಶಿಧರ ಪಿಳ್ಳೆ , ಗೋಪಾಲ ನಡುಬೈಲು, ಭಾಸ್ಕರ ನಾಯರ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕೇರ್ಪಳ
ರವರು ಉಪಸ್ಥಿತರಿದ್ದರು.
ಆರ್ಥಿಕ ಸಮಿತಿ ಸಂಚಾಲಕರಾಗಿ ಅಶೋಕ ಪ್ರಭು ಸುಳ್ಯ , ಉಪಾಧ್ಯಕ್ಷ ರಾಗಿ ಪಿ.ಕೆ ಉಮೇಶ್,ವೆಂಕಪ್ಪ ಗೌಡ , ವಿನಯಕುಮಾರ್ ಕಂದಡ್ಕ, ದೇವರಾಜ್ ಸುಳ್ಯ, ಗಿರೀಶ್ ದೇಂಗೋಡಿ ಯವರನ್ನು ಆಯ್ಕೆ ಮಾಡಲಾಯಿತು.
ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ವಿವರವನ್ನು ಪ್ರಾಸ್ತಾವಿಕ ಮಾತಿನೊಂದಿಗೆ ಸಮಿತಿ ಸದಸ್ಯ ಎಂ.ಬಿ.ಸದಾಶಿವ ರವರು ತಿಳಿಸಿದರು.
ಪುರೋಹಿತ ನಾಗರಾಜ್ ಭಟ್ ಪ್ರಾರ್ಥಿಸಿದರು. ಅಶೋಕ ಪ್ರಭು ರವರು ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂದಿರದ ಧರ್ಮದರ್ಶಿ ಮಂಡಳಿಯ ಸದಸ್ಯರು, ರಾಮ ಸೇವಾ ಸಮಿತಿ ಸದಸ್ಯರು ಸಹಕರಿಸಿದರು. ಸ್ಥಳೀಯ ಭವದ್ಭಕ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.