ಕಡೆಪಾಲ ಬಳಿ ಆಟೋ ರಿಕ್ಷಾ ಪಲ್ಟಿ- ಅಪಾಯದಿಂದ ಪಾರು

0

ಕಲ್ಲುಗುಂಡಿಯ ಕಡೆಪಾಲದಲ್ಲಿ ದನ ಅಡ್ಡ ಬಂದು ರಿಕ್ಷಾ ಪಲ್ಟಿಯಾದ ಘಟನೆ ಇಂದು ಸಂಜೆ ನಡೆದಿದೆ.

ಕಲ್ಲುಗುಂಡಿಯಿಂದ ಸುಳ್ಯಕ್ಕೆ ನಿಡಿಂಜಿ ಉಮೇಶ ಎಂಬವರು ಚಲಾಯಿಸುತ್ತಿದ್ದ ರಿಕ್ಷಾಕ್ಕೆ ದಿಡೀರ್ ದನ ಅಡ್ಡ ಬಂದಿದ್ದು, ರಿಕ್ಷಾ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಪಲ್ಟಿ ಯಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿoದ ಪಾರಾಗಿದ್ದಾರೆ.