ಮಣಿಪಾಲ್ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಯವರಿಗೆ ದ್ವಿತೀಯ ಸ್ಥಾನ

0

ಫೆ. 11 ರಂದು ಮಣಿಪಾಲದಲ್ಲಿ ನಡೆದ 42 ಕಿ.ಮೀ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಯವರು ಭಾಗವಹಿಸಿ ದ್ವಿತೀಯ ಸ್ಥಾನದೊಂದಿಗೆ ರೂ. 10,000 ನಗದು ಬಹುಮಾನ ಪಡೆದುಕೊಂಡಿದ್ದಾರೆ. ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಯ ಪುತ್ರಿಯಾಗಿರುವ ಇವರು ಬಳ್ಪ ಸ.ಉ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದಾರೆ.