ಸುಳ್ಯ ನಾವೂರು ಹಝ್ರತ್ ಸಯ್ಯಿದ್ ಅಲವಿ ತಂಙಳ್ (ವಲಿಯ ತಂಙಳ್)ರವರ ೨೪ನೇ ಆಂಡ್ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮ ಫೆ. ೨೮ರಂದು ಭಕ್ತಿಪೂರ್ವಕ ಪ್ರಾರ್ಥನೆಯೊಂದಿಗೆ ಸಮಾಪ್ತಿಗೊಂಡಿತು.
ಸಯ್ಯಿದ್ ಕುಂಞಿಕೋಯ ತಂಙಳ್ ಸಅದಿ ಸುಳ್ಯ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಹಿಕ ಪ್ರಾರ್ಥನೆಯನ್ನು ಸಯ್ಯದ್ ಇಬ್ರಾಹಿಂ ಬಾತಿಷಾ ತಂಙಳ್ ಕಿನ್ಯ ನೆರವೇರಿಸಿದರು.
ಅಹಮ್ಮದ್ ಮದನಿ ನೇರಳಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಪ್ರಭಾಷಣಕಾರರಾಗಿ ಖ್ಯಾತ ವಾಗ್ಮಿ ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮಾತನಾಡಿ ‘ಪ್ರವಾದಿಯವರ ಸಂದೇಶ ಕುರಿತು ಮಾಹಿತಿ ನೀಡಿ ಸ್ವಲಾತ್‌ನ ಪ್ರಯೋಜನದ ಬಗ್ಗೆ ಹೇಳಿದರು.
ವೇದಿಕೆಯಲ್ಲಿ ಹಿರಿಯರಾದ ಇಸ್ಮಾಯಿಲ್ ಮದನಿ ನೇರಳಕಟ್ಟೆ, ಸಯ್ಯಿದ್ ಪೂಕೋಯ ತಂಙಳ್, ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ಜಯನಗರ, ಸಯ್ಯದ್ ಹಿಬತುಲ್ಲಾ ತಂಙಳ್ ಸುಳ್ಯ, ಸಲಾಹುದ್ದೀನ್ ಸಖಾಫಿ ಮಾಡನ್ನೂರು, ಹುಸೈನ್ ತಂಙಳ್ ಆದೂರು, ಅಮೀರ್ ತಂಙಳ್ ಕಿನ್ಯ,ಅಲವಿ ತಂಙಳ್ ಹೊನ್ನಾವರ, ಖಾಸಿಂ ತಂಙಳ್ ಕುಂಟಾರು, ಹುಸೈನ್ ಮದನಿ ನೇರಳಕಟ್ಟೆ, ಇರ್ಷಾದ್ ಸಅದಿ ನೇರಳಕಟ್ಟೆ, ಸ್ವಾಗತ ಸಮಿತಿ ಚೇರ್‌ಮೆನ್ ಅಬೂಬಕ್ಕರ್ ಸಖಾಫಿ ಪಾರೆ ಮೊದಲಾದವರು ಉಪಸ್ಥಿತರಿದ್ದರು.
ಸಂಜೆ ೫ ಗಂಟೆಗೆ ಮಖಾಂ ಝೀಯಾರತ್ ನಡೆದು ಬಳಿಕ ಮೌಲೀದ್ ಪಾರಾಯಣ ನಡೆಯಿತು. ಸಯ್ಯಿದ್ ಅಝ್ ಹರ್ ತಂಗಳ್ ಕುಣಿಯ ರವರ ನೇತೃತ್ವದಲ್ಲಿ ತಂಡದಿಂದ ಬುರ್ದಾ ಮಜ್ಲಿಸ್ ನಡೆಯಿತು. ಎ.ಬಿ. ಅಬ್ದುಲ್ಲಾ ಸಅದಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸ್ಥಳೀಯ ಯುವಕರು, ಸ್ವಾಗತ ಸಮಿತಿ ಸದಸ್ಯರು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಅನನ್ನಪ್ರಸಾದ ಸ್ವೀಕರಿಸಿದರು.