ಅನ್ಸಾರಿಯ ಎಜುಕೇಶನ್ ಸೆಂಟರ್ ಇದರ ವತಿಯಿಂದ ಬದ್ರ್ ಸ್ಮರಣೆ ಕಾರ್ಯಕ್ರಮ ಹಾಗೂ ಇಪ್ತಾರ್ ಕೂಟ ಮತ್ತು ಅನ್ಸಾರಿಯ ಖತೀಬರಾಗಿ ಸೇವೆ ಸಲ್ಲಿಸಿದ ಉಮ್ಮರ್ ಉಸ್ತಾದ್ ರವರಿಗೆ ಬಿಳ್ಕೊಡುಗೆ ಕಾರ್ಯಕ್ರಮ ಮಾ.27 ರಂದು ಅನ್ಸಾರಿಯ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದುವಾಶಿರ್ವಚನ ಮೂಲಕ ಅನ್ಸಾರಿಯ ಮುದರಿಸ್ ಅಬೂಭಕ್ಕರ್ ಹಿಮಮಿ ಸಖಾಫಿ ಚಾಲನೆ ನೀಡಿದರು. ಅನ್ಸಾರಿಯ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಅನ್ಸಾರಿಯದಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸಿದ ಉಮ್ಮರ್ ಉಸ್ತಾದ್ ರವರನ್ನು ಅನ್ಸಾರಿಯ ಅಡಳಿತ ಸಮಿತಿ ವರ್ಷಗಳ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಅನ್ಸಾರಿಯ ಎಜುಕೇಶನ್ ಸೆಂಟರ್ ಪರಿಸರ ನಿವಾಸಿಗಳು, ದಹವಾ ವಿದ್ಯಾರ್ಥಿಗಳು ಉಸ್ತಾದವರನ್ನು ಗೌರವಿಸಿದರು.
ಬಿಎಂಎ ಗ್ರೂಪ್ಸ್ ಹಾಜಿ ಅಬೂಭಕ್ಕರ್ ಬಿ.ಎಂ ಅನ್ಸಾರಿಯ ವಿದ್ಯಾರ್ಥಿಗಳಿಗೆ ರಂಜಾನ್ ಪ್ರಯುಕ್ತ ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಿದರು.
ಕಾರ್ಯಕ್ರಮ ವೇದಿಕೆಯಲ್ಲಿ ಅನ್ಸಾರ್ ಅಧ್ಯಕ್ಷ ಹಾಜಿ ಶುಕೂರ್, ಅನ್ಸಾರಿಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಉಪಾಧ್ಯಕ್ಷ ಹಾಜಿ ಕಲಾಂ ಕಟ್ಟೆಕ್ಕಾರ್, ಎಸ್ ಪಿ ಅಬೂಭಕ್ಕರ್, ಕಾರ್ಯದರ್ಶಿ ಕಮಾಲ್, ಅನ್ಸಾರಿಯ ನಿರ್ದೇಶಕರು, ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೊ, ಅನ್ಸಾರಿಯ ಶಾದಿಮಹಲ್ ಕಾಮಗಾರಿ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಟೇಲ್, ಹಾಜಿ ಮೊಯ್ದೀನ್ ಪ್ಯಾನ್ಸಿ, ಗಾಂಧಿನಗರ ಜಮಾಯತ್ ಕಮಿಟಿ ನಿರ್ದೇಶಕ ಅಬ್ದುಲ್ ಮಜೀದ್ ಕೆಬಿ, ಅನ್ಸಾರಿಯ ನಿರ್ದೇಶಕರಾದ ಹಾಜಿ ಅಬ್ದುಲ್ ಹಮೀದ್ ಜನತಾ, ಮುಸ್ತಫಾ ಬೀಜಕೊಚ್ಚಿ, ಸಿದ್ದೀಕ್ ಕಟ್ಟೆಕ್ಕಾರ್, ಸಲಹಾ ಸಮಿತಿ ಸದಸ್ಯರಾದ ಬಾಬ ಹಾಜಿ ಎಲಿಮಲೆ, ದ.ಕ ಜಿಲ್ಲಾ ವಕ್ಪ್ ಸಲಹಾ ಸಮಿತಿ ಸದಸ್ಯರಾದ ಅಬ್ದುಲ್ ರಹಿಮಾನ್, ಅನ್ಸಾರ್ ನಿರ್ದೇಶಕ ಸಿದ್ದೀಕ್ ಬಿಎ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಅಬ್ದುಲ್ಲಾ ಕಲಾಂ ಬೀಜಕೊಚ್ವಿ ಸ್ವಾಗತಿಸಿ , ಅನ್ಸಾರಿಯ ವ್ಯವಸ್ಥಾಪಕ ಉವೈಸ್ ಹಾಗೂ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಅನ್ಸಾರಿಯ ಅಧ್ಯಾಪಕರುಗಳಾದ ನೌಶದ್ ಮದನಿ, ಸಯ್ಯದ್ ಹುಸೈನ್ ಸಹದಿ ತಂಙಳ್, ಅಬ್ದುಲ್ಲಾ ಹಿಮಮಿ, ಮುಈನಿ, ಸಹಕರಿಸಿದರು
ಬಿಳ್ಕೊಡುಗೆ ಕಾರ್ಯಕ್ರಮದ ನಂತರ ಇಪ್ತಾರ್ ಕೂಟ ಏರ್ಪಡಿಸಲಾಯಿತು.