ಸಂಪಾಜೆ: ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ

0

ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುವ ಸಂಪಾಜೆ ಯಕ್ಷೋತ್ಸವ – 2024 ಉದ್ಘಾಟನೆ ಹಾಗೂ ಬ್ರಹ್ಮೈಕ್ಯ ಕೇಶವಾನಂದ ಭಾರತಿ ಶ್ರೀಪಾದರ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಕಲ್ಲುಗುಂಡಿ ಶಾಲಾ ವಠಾರದಲ್ಲಿ ನ.9ರಂದು ನಡೆಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.


ಕಾಸರಗೋಡಿನ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹಾಗೂ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ಬಾಮೀಜಿ ಅವರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಶ್ಯಾಮ್ ಭಟ್ ಸಂಪಾಜೆ, ಯಕ್ಷೋತ್ಸವ ಸಮಿತಿ ಅಧ್ಯಕ್ಷ ರಾಜಾರಾಮ ಕೀಲಾರು ಉಪಸ್ಥಿತರಿದ್ದರು.

ಶ್ರೀ ಕೇಶವಾನಂದ ಭಾರತಿ ಪ್ರಶಸ್ತಿ ಪ್ರಧಾನ

ಶ್ರೀ ಕೇಶವಾನಂದ ಭಾರತಿ ರಾಷ್ಟ್ರೀಯ ನ್ಯಾಯ ಪ್ರಶಸ್ತಿಯನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಸ್ಟೀಸ್ ರವೀಂದ್ರ ಭಟ್ , ಶ್ರೀ ಕೇಶವಾನಂದ ಭಾರತಿ ಶೈಕ್ಷಣಿಕ ಪ್ರಶಸ್ತಿಯನ್ನು ಮಂಗಳೂರಿನ ಎಕ್ಸ್ಪರ್ಟ್ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೋ. ನರೇಂದ್ರ ಎಲ್. ನಾಯಕ್, ಶ್ರೀ ಕೇಶವಾನಂದ ಭಾರತಿ ಸಂಗೀತ ಪ್ರಶಸ್ತಿಯನ್ನು ಹಿರಿಯ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ಶ್ರೀಮತಿ ಎಂ.ಎಸ್. ಶೀಲಾ, ಶ್ರೀ ಕೇಶವಾನಂದ ಭಾರತಿ ಯಕ್ಷಗಾನಾಧ್ವರ್ಯು ಪ್ರಶಸ್ತಿಯನ್ನು ಯಕ್ಷಗಾನ ಸ್ತ್ರೀ ವೇಷಧಾರಿ ಹಾಗೂ ಏಕವ್ಯಕ್ತಿ ಪ್ರದರ್ಶನ ಕಲಾವಿದ ಪ್ರಭಾಕರ ಉಪಾಧ್ಯ, ಯಕ್ಷೋತ್ಸವ ವೈದಿಕ ಪ್ರಶಸ್ತಿಯನ್ನು ರಾಜಗುರು ಬಿ.ಎಸ್. ದ್ವಾರಕಾನಾಥ್ ಬೆಂಗಳೂರು, ಯಕ್ಷೋತ್ಸವ ಕಲಾ ಪೋಷಕ ಪ್ರಶಸ್ತಿಯನ್ನು ಸರವು ಕೃಷ್ಣಭಟ್ ಅವರಿಗೆ, ಯಕ್ಷೋತ್ಸವ ಸಮ್ಮಾನವನ್ನು ಪ್ರಸಿದ್ಧ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.

ಹಿರಿಯ ನ್ಯಾಯವಾದಿ ಕೆ.ಪಿ. ಬಾಲಸುಬ್ರಹ್ಮಣ್ಯ, ನಿವೃತ್ತ ಪ್ರಾಂಶುಪಾಲ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೋ. ಎಂ.ಎಲ್. ಸಾಮಗ, ಹಿರಿಯ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್, ಯಕ್ಷಗಾನ ಕಲಾವಿದ ಹಾಗೂ ಸಂಘಟಕ ವಾಸುದೇವ ರಂಗಾ ಭಟ್ ಅವರು ಅಭಿನಂದನಾ ಮಾತುಗಳನ್ನಾಡಿದರು.

ಯಕ್ಷಗಾನ ಕಲಾವಿದ ಹಾಗೂ ಸಂಘಟಕ ಉಜಿರೆ ಅಶೋಕ ಭಟ್ ಅವರು ಗುರುವಂದನೆ ಸಲ್ಲಿಸಿದರು. ಯಕ್ಷಗಾನ ಅರ್ಥದಾರಿ ಜಬ್ಬಾರ್ ಸಮೋ ಅವರು ಡಾ. ಕೀಲಾರು ಸಂಸ್ಮರಣೆ ಮಾಡಿದರು‌.

ಯಕ್ಷೋತ್ಸವ ಪ್ರಯುಕ್ತ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ಚಕ್ರ ಚಂಡಿಕೆ (ಬಡಗು), ಮೀನಾಕ್ಷಿ ಕಲ್ಯಾಣ (ತೆಂಕು – ಬಡಗು) , ಕಾಯಕಲ್ಪ (ತೆಂಕು) , ತ್ರಿದಶದಲ್ಲಣ (ತೆಂಕು ) ಯಕ್ಷಗಾನ ಪ್ರದರ್ಶನಗೊಳ್ಳುತ್ತಿದೆ.