Home ಕ್ರೈಂ ನ್ಯೂಸ್ ಆಲೆಟ್ಟಿ ಗ್ರಾಮದ ವಿವಿಧೆಡೆ ಕಾಡಾನೆಗಳಿಂದ ಕೃಷಿ ನಾಶ-ಅರಣ್ಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ

ಆಲೆಟ್ಟಿ ಗ್ರಾಮದ ವಿವಿಧೆಡೆ ಕಾಡಾನೆಗಳಿಂದ ಕೃಷಿ ನಾಶ-ಅರಣ್ಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ

0

ಆಲೆಟ್ಟಿ ಗ್ರಾಮದ ಸರಳಿಕುಂಜ ಎಂಬಲ್ಲಿ ಏ.೩ರ ತಡರಾತ್ರಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು ಸ್ಥಳೀಯ ನಿವಾಸಿ ಶ್ರೀಮತಿ ವೀಣಾ ತಿಮ್ಮಪ್ಪ ರವರ ತೋಟಕ್ಕೆ ನುಗ್ಗಿ ಕೃಷಿ ಬೆಳೆಯನ್ನು ನಾಶ ಪಡಿಸಿದೆ. ತೋಟಕ್ಕೆ ದಾಳಿ ನಡೆಸಿದ ಆನೆಗಳ ಹಿಂಡು ಅಡಿಕೆ ಮರ, ತೆಂಗಿನ ಮರ ಮತ್ತು ಬಾಳೆ ಗಿಡಗಳನ್ನು ಧ್ವಂಸ ಮಾಡಿದೆ.

ಹಾಗೆಯೇ ಅರಂಬೂರು ಅಬ್ದುಲ್ ರಹೆಮಾನ್ ರವರ ತೋಟಕ್ಕೆ ಇಂದು ಬೆಳಗ್ಗಿನ ಜಾವ ನುಗ್ಗಿದ ಆನೆಯ ಗುಂಪು ಕೃಷಿ ನಾಶ ಮಾಡಿದ್ದಲ್ಲದೆ, ನೀರಾವರಿಯ ಪೈಪುಗಳನ್ನು ಒಡೆದು ಹಾಕಿ ನಷ್ಟ ಉಂಟು ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆ.

NO COMMENTS

error: Content is protected !!
Breaking