ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ
ಡಾ. ಅಶ್ವಿನ್ ಶೆಣೈಯವರಿಗೆ ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.
“ಡೀಪ್ ಲರ್ನಿಂಗ್-ಬೇಸ್ಡ್ ಇಂಟೆಲಿಜೆಂಟ್ ಸರ್ವೈಲೆನ್ಸ್ ಫಾರ್ ಎನ್ಹ್ಯಾನ್ಸ್ಡ್ ಕ್ರೌಡ್ ರೆಕಗ್ನಿಷನ್, ಆಕ್ಟಿವಿಟಿ ಕ್ಯಾಟರೈಸೇಶನ್, ಅಂಡ್ ಅರ್ಲಿ ಡಿಟೆಕ್ಷನ್ ಇನ್ ಕಂಟ್ರೋಲ್ಡ್ ಎನ್ವಿರಾನ್‌ಮೆಂಟ್ಸ್” ಎಂಬ ಶೀರ್ಷಿಕೆಯ ಅವರ ಸಂಶೋಧನೆಯನ್ನು ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದ ಡಾ. ಎನ್. ತಿಲೈಅರಸು ಅವರ ಮಾರ್ಗದರ್ಶನದಲ್ಲಿ ಪಿ ಎಚ್ ಡಿ ಪದವಿ ಪೂರೈಸಿದ್ದಾರೆ. ಇವರು ಗೋಕುಲದಾಸ್ ಶಾನುಭಾಗ್ ನೆಟ್ಟಾರು ಮತ್ತು ಗೀತಾ ಶೆಣೈ ಎಂ ನೆಟ್ಟಾರು ಪುತ್ರ.
ಡಾ.ಅಶ್ವಿನ್ ಶೆಣೈ ಯವರ ಪತ್ನಿ ಶ್ರೀಮತಿ ಸನಿಹಾ ಪೈ ಕೆ.ಸಿವಿಲ್ ಇಂಜಿನಿಯರ್ ಆಗಿದ್ದು, ಮಕ್ಕಳಾದ ಅದ್ವಿಕಾ ಶೆಣೈ ಎಂ, ನವ್ರನ್ ಶೆಣೈರೊಂದಿಗೆ ನಿಟ್ಟೆಯಲ್ಲಿ ವಾಸವಾಗಿದ್ದಾರೆ.