ಸರಕಾರಿ ಕಾರ್ಯಕ್ರಮದಲ್ಲಿ ಪ್ರೊಟೊಕಾಲ್ ಪಾಲಿಸದಿದ್ದರೆ ಪ್ರತಿಭಟನೆ : ಶಾಹುಕ್ ಹಮೀದ್

0

ಸರಕಾರಿ‌ ಕಾರ್ಯಕ್ರಮದಲ್ಲಿ ಪ್ರೊಟೊಕಾಲ್ ಪಾಲನೆ ಕಡ್ಡಾಯವಾಗಿದ್ದು ಅಧಿಕಾರಿಗಳು ಇದನ್ನು ಪಾಲಿಸಬೇಕು. ಇದು ಹೀಗೆ ಮುಂದುವರಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಪ್ರೊಟೊಕಾಲ್ ಪಾಲಿಸುತ್ತಿಲ್ಲ. ಸರಕಾರದ ನಾಮನಿರ್ದೇಶಿತ ಅಧ್ಯಕ್ಷರು, ಸದಸ್ಯರುಗಳನ್ನು ಸರಕಾರಿ ಕಾರ್ಯಕ್ರಮದಲ್ಲಿ ಕರೆಯಬೇಕು ಮತ್ತು ಪ್ರೊಟೊಕಾಲ್ ಪ್ರಕಾರ ಹೆಸರು ಹಾಕಬೇಕು. ಹಾಗಿದ್ದು ಪಾಲಿಸದೇ ಇದ್ದರೆ ಮುಂದಿನ ದಿನ ಪ್ರತಿಭಟಿಸುತ್ತೇವೆ.

ಎ.5ರಂದು ಸುಳ್ಯ ಸರಕಾರಿ ಆಸ್ಪತ್ರೆ ಕಾರ್ಯಕ್ರಮದಲ್ಲಿ ಪ್ರೊಟೊಕಾಲ್ ಪಾಲಿಸಿಲ್ಲ. ಅಲ್ಲಿ ನಾವು ಪ್ರತಿಭಟಿಸುವೆವು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾ ಆರೋಗ್ಯ ಅಧಿಕಾರಿಗಳಿ ವಿಷಯ ತಿಳಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ