ಜಟ್ಟಿಪಳ್ಳ ಮನೆಯ ಕಾಂಪೌಂಡ್ ಗೋಡೆ ಕುಸಿತ

0

ಎಡೆಬಿಡದೆ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಸುಳ್ಯ ಜಟ್ಟಿಪಳ್ಳದ ಸಲಾಂ ಬೂಡು ಎಂಬವರ ಮನೆಯ ಮುಂಭಾಗದ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಘಟನೆ ಇಂದು ನಡೆದಿದೆ.

ಜು 19 ರಂದು ಬೆಳಿಗ್ಗೆ ಸುರಿದ ಭಾರೀ ಮಳೆಗೆ ಮನೆಯ ಮುಂಭಾಗದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದ್ದು ಸಮೀಪದ ಇನ್ನೊಂದು ಕಾಂಪೌಂಡ್ ಕೂಡ ಬೀಳುವಂತಾಗಿದೆ ಆ ರಸ್ತೆ ಸಮೀಪದ ಮನೆಯವರು ನಡೆದಾಡುವ ರಸ್ತೆಯಾಗಿದ್ದು , ಆ ರಸ್ತೆಯಲ್ಲಿ ಮಸೀದಿಗೆ ಬರುವ ಮಕ್ಕಳು ಕೂಡ ಓಡಾಡುತ್ತಾರೆ. ಅಪಾಯ ಸಂಭವಿಸುವುದಕ್ಕಿಂತ ಮುನ್ನ ಎಚ್ಚೆತ್ತುಕೊಂಡು ಕ್ರಮಕೈಗೊಂಡರೆ ಅಪಾಯ ತಪ್ಪಿಸಬಹುದು.