ಸೇತುವೆ ಮುಳುಗಡೆ ಭೀತಿಯಲ್ಲಿ ಕೊಡಿಯಾಲಬೈಲ್ ಸ್ಥಳೀಯರು
ಕಳೆದ ಕೆಲವು ದಿನಗಳಿಂದ ವಿಪರೀತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಸುಳ್ಯದ ಜಟ್ಟಿಪಳ್ಳ ಕೊಡಿಯಾಲಬೈಲ್ ಪ್ರದೇಶದಲ್ಲಿ ಹಾದು ಹೋಗುವ ಕಂದಡ್ಕ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಸೇತುವೆ ಮುಳುಗಡೆಯಾಗಲು ಎರಡು ಪೀಟ್ ಬಾಕಿಯಿದೆ. ಇದರಿಂದಾಗಿ ಇನ್ನಷ್ಟುಮಳೆ ಸುರಿದರೆ ಸೇತುವೆ ಮುಳುಗುವ ಭೀತಿಯಲ್ಲಿದ್ದಾರೆ ಈ ಭಾಗದ ನಿವಾಸಿಗಳು.
ಈಗಾಗಲೇ ಸಮೀಪದ ತೋಟಗಳಲ್ಲಿ ನೀರು ತುಂಬಿ ಹೊಳೆಯಾಗಿದೆ.
ಈ ಸೇತುವೆಯಲ್ಲಿ ಹಲವಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಡೆದಾಡುತ್ತಾರೆ.
ಅದರಿಂದ ಸ್ಥಳೀಯಡಳಿತ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.