ಮೂಲಭೂತ ಸೌಕರ್ಯಗಳ ಬಗ್ಗೆ ಭಾರೀ ಚರ್ಚೆ – ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ
ಎಡಮಂಗಲ ಗ್ರಾಮ ಪಂಚಾಯತ್ ನ 2024 – 25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಆ.13 ರಂದು ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರುರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಾಮಾಜಿಕ ಅರಣ್ಯದ ವಲಯಾರಣ್ಯಾಧಿಕಾರಿ ವಿದ್ಯಾರಾಣಿ ನೋಡೆಲ್ ಅಧಿಕಾರಿಯಾಗಿದ್ದರು.
ಪಂಚಾಯತ್ ಸಿಬ್ಬಂದಿ ದೇವಿಪ್ರಸಾದ್ ಕೆ.ಸಿ.ವರದಿ ಮಂಡಿಸಿದರು.ಪಿಡಿಒ ಸ್ವಾಗತಿಸಿದರು.
ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ರಸ್ತೆ,ವಿದ್ಯುತ್,ಚರಂಡಿ,ವಸತಿ ವ್ಯವಸ್ಥೆ,ಸ್ಮಶಾನನ ಬಗ್ಗೆ ಚರ್ಚೆಗಳು ನಡೆದವು.
ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಲು ಕಾರಣಕರ್ತರಾದ ಶಿಕ್ಷಕರನ್ನು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಂಗನವಾಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪಿಡಿಒ ಶ್ರೀಮತಿ ಭವ್ಯ ಎಂ.ಬಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ದಿವ್ಯ ಎಂ.ಆರ್. ಸದಸ್ಯರಾದ ನವೀನ್ ಕುಮಾರ್ ಕರಿಂಬಿಲ,ಮಾಯಿಲಪ್ಪ ಗೌಡ ಪಟ್ಟೆ,ದುಶ್ಯಂತ ದೋಣಿಮನೆ,ನಾಗೇಶ ಮರೋಳಿ,ಮಾಧವ ಡೆಮೈಲ,ಶ್ರೀಮತಿ ಗೀತಾ ಮರ್ದೂರು,ಶ್ರೀಮತಿ ಲೀಲಾವತಿ ಉಚ್ಚಮೂಲೆ,ಶ್ರೀಮತಿ ರೇವತಿ ಎಂಜೀರು,ಶ್ರೀಮತಿ ಸುಮ ನೂಚಿಲ,ಶ್ರೀಮತಿ ವನಿತಾ ಕಾಯ್ತಿಮಾರು,ಶ್ರೀಮತಿ ರೇವತಿ ಕಟ್ಟ ಕಾಲೋನಿ,ಶ್ರೀಮತಿ ಸವಿತ ಉಪಸ್ಥಿತರಿದ್ದರು.