ಸ.ಹಿ ಪ್ರಾ ಶಾಲೆ ಮುಡ್ನೂರು ಮರ್ಕಂಜದಲ್ಲಿ ಸ್ವಾಂತಂತ್ರ್ಯ ದಿನಾಚರಣೆ

0

ಸ.ಹಿ.ಪ್ರಾ.ಶಾಲೆ ಮುಡ್ನೂರು ಮರ್ಕಂಜ ಇಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ನಿವೃತ್ತ ಸೈನಿಕ ಹವಲ್ದಾರ್ ಉಮೇಶ್ ಮಣಿಯಾಣಿ ಇವರು ಧ್ವಜಾರೋಹಣ ನಡೆಸಿಕೊಟ್ಟರು.

ಮುಖ್ಯ ಶಿಕ್ಷರಾದ ದೇವರಾಜ್ ಇವರು ಸ್ವಾಗತಿಸಿದರು. ನಂತರ ಬ್ಯಾಂಡ್ ಸೆಟ್ ನ ಮೂಲಕ ಮರ್ಕಂಜ ಪೇಟೆಯಲ್ಲಿ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ನಿವೃತ್ತ ಸೈನಿಕರು, ಪೋಷಕರು, ಊರಿನ ಹಿರಿಯರು, ವಿದ್ಯಾಭಿಮಾನಿಗಳು, ಸಂಘ- ಸಂಸ್ಥೆಯವರು, ಹಳೆ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಪಾಲ್ಗೊಂಡರು.


ನಂತರ ಶಾಲೆಯಲ್ಲಿ ಸಭಾ ಸಮಾರಂಭವನ್ನು ನಡೆಸಲಾಯಿತು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಿಜಯಕುಮಾರ್ ಎರ್ಮೆಟ್ಟಿ, ನಿವೃತ್ತ ಸೈನಿಕರಾದ ಉಮೇಶ್ ಮಣಿಯಾಣಿ, ಶಾಲಾ ಮುಖ್ಯ ಶಿಕ್ಷಕರಾದ ದೇವರಾಜ್ ಎಸ್.ಕೆ, ನಿವೃತ್ತ ಮುಖ್ಯ ಶಿಕ್ಷಕರಾದ ವಾಸು ಗೌಡ ಪಾನತ್ತಿಲ, ನಿವೃತ್ತ ಸಹ ಶಿಕ್ಷಕರಾದ ಅಚ್ಚುತ ಪಿ, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನವೀನ್ ನಳಿಯಾರು, ಮುಖ್ಯ ಅಥಿತಿಗಳಾಗಿ ಹಿರಿಯರು ಹಾಗೂ ಹಳೆ ವಿದ್ಯಾರ್ಥಿ ನಾಗಕುಮಾರ್ ಶೆಟ್ಟಿ ಬಲ್ನಾಡುಪೇಟೆ, ಗ್ರಾ.ಪಂ. ಅಧ್ಯಕ್ಷರಾದ ಗೀತಾ ಹೊಸೋಳಿಕೆ ಇವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಹವಲ್ದಾರ್ ಉಮೇಶ್ ಮಣಿಯಾಣಿ ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಶಾಲೆಗೆ ಡಯಾಸ್ ಅನ್ನು ತಾವೇ ತಯಾರಿಸಿ ಕೊಡುಗೆಯಾಗಿ ನೀಡಿದ ಹಳೆ ವಿದ್ಯಾರ್ಥಿ ಸುಕುಮಾರ್ ಆಚಾರ್ಯ ತುಂಬೆತ್ತಡ್ಕ ಇವರನ್ನು ಸನ್ಮಾನಿಸಲಾಯಿತು.

ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿವಿಧ ದಾನಿಗಳಿಂದ ಕೊಡಲ್ಪಟ್ಟ ದತ್ತು ನಿಧಿಯನ್ನು ನೀಡಲಾಯಿತು. ಶಾಲಾ ಸಹಶಿಕ್ಷಕಿಯಾದ ಶ್ರೀಮತಿ ಯಶಸ್ವಿನಿ ಕೆ.ಎಸ್ ಇವರು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಪರಿಕಲ್ಪನೆಯ ಸಂಪೂರ್ಣ ವಿವರಣೆಯನ್ನು ನೀಡಿದರು. ಹಿರಿಯ ಶಿಕ್ಷಕರಾದ ಬೆಳ್ಯಪ್ಪ ಕೊಡ್ತುಗುಳಿ ಇವರು ಸ್ವಾಗತಿಸಿ, ಶಿಕ್ಷಕಿ ದ್ರವ್ಯ ಇವರು ವಂದನಾರ್ಪಣೆ ಮಾಡಿದರು. ಶಿಕ್ಷಕಿ ಜ್ಯೋತಿ ಇವರು ದತ್ತು ನಿಧಿ ಪಟ್ಟಿ ವಾಚಿಸಿದರು. ಸಹಶಿಕ್ಷಕಿಯಾದ ಕು. ಅಶ್ವಿನಿ ಮುಂಡೋಡಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳು , ಹಳೆ ವಿದ್ಯಾರ್ಥಿ ಸಂಘ, ಯುವತಿ ಮತ್ತು ಮಹಿಳಾ ಮಂಡಳಿ, ಆಟೋ ಚಾಲಕ ಮತ್ತು ಮಾಲಕ ಸಂಘ, ಅಂಗಡಿ ಮಾಲಕರು, ಊರಿನ ಹಿರಿಯರು, ಶಾಲಾಭಿವೃದ್ಧಿ ಸಮಿತಿಯವರು, ಪೋಷಕರು, ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.