ಜಾಲ್ಸೂರು ಗ್ರಾ. ಪಂ ಅಧ್ಯಕ್ಷತೆಗೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ರಾಜೀನಾಮೆ ಸಲ್ಲಿಕೆ

0

ಜಾಲ್ಸೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರು ತಮ್ಮ ಅಧ್ಯಕ್ಷತೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರ ಒಂದೂಕಾಲು ವರ್ಷದ ಅಧ್ಯಕ್ಷತೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರು ಇದೀಗ ಪುತ್ತೂರಿನ ಎ.ಸಿ. ಕಛೇರಿಯಲ್ಲಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ಗ್ರಾ.ಪಂ. ಆಡಳಿತ ಅವಧಿ ಇನ್ನು ಒಂದೂಕಾಲು ವರ್ಷವಿದ್ದು, ಗ್ರಾ.ಪಂ. ಅಧ್ಯಕ್ಷತೆ ಮೀಸಲಾತಿ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು, ಅದರಂತೆ ಈ ಹಿಂದೆ ಗ್ರಾ.ಪಂ. ಉಪಾಧ್ಯಕ್ಷೆಯಾಗಿದ್ದ ಶ್ರೀಮತಿ ಲೀಲಾವತಿ ವಿನೋಬನಗರ ಹಾಗೂ ಸದಸ್ಯರಾಗಿರುವ ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು ಇವರಿಬ್ಬರಲ್ಲಿ ಒಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ಒಟ್ಟು 17 ಸದಸ್ಯ ಬಲದ ಗ್ರಾಮ ಪಂಚಾಯತಿ ಆಡಳಿತದಲ್ಲಿ ಬಿಜೆಪಿ ಬೆಂಬಲಿತ 11 ಮಂದಿ, ಕಾಂಗ್ರೆಸ್ ಬೆಂಬಲಿತ 3 ಮಂದಿ ಹಾಗೂ ಪಕ್ಷೇತರ 3 ಮಂದಿ ಸದಸ್ಯರುಗಳಿದ್ದಾರೆ.