ಜೇಸಿ ಐ ಪಂಜ ಪಂಚಶ್ರೀ ಪ್ರಾಂತ್ಯ ಎಫ್ ವಲಯ 15 ಮುಡೂರು ಇನ್ಫೋಟೆಕ್ ಪಂಜ ಇದರ ಆಶ್ರಯದಲ್ಲಿ ದಿಕ್ಸೂಚಿ ಸರಣಿ ತರಬೇತಿ ಕಾರ್ಯಗಾರ ನಲಿವಿನ ಓದು ಗೆಲುವಿನ ಕಡೆಗೆ ಜ.4 ರಂದು ಕಡಬ ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯಲ್ಲಿ ನಡೆಯಿತು.
. ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೇಸಿ ಎಚ್ ಜೆ ಎಫ್ ವಾಚಣ್ಣ ಕೆರೆಮೂಲೆ ವಹಿಸಿದ್ದರು. ಉದ್ಘಾಟನೆಯನ್ನು ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕ
ವಂದನೀಯ ಫಾಧರ್ ಪ್ರಕಾಶ್ ಪೌಲ್ ಡಿ ಸೋಜಾ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಜೇಸಿಐ ವಲಯಾಧ್ಯಕ್ಷ ಪಿಪಿಪಿ ಅಶೋಕ್ ಚೂಂತಾರು, ತರಬೇತುದಾರರಾಗಿ ಮುಡೂರು ಇನ್ಫೋಟೆಕ್ ಮಾಲಕ, ವಲಯ ತರಬೇತುದಾರ ಜೆಎಫ್ಎಂ ಸವಿತಾರ ಮುಡೂರು , ವಲಯ ತರಬೇತುದಾರ ಜೆಎಫ್ಎಂ ಸೋಮಶೇಖರ ನೇರಳ , ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ಜೇಸಿ ಎಚ್ ಜಿ ಎಫ್ ಅಶ್ವಥ್ ಬಾಬ್ಲುಬೆಟ್ಟು,ಕಾರ್ಯಕ್ರಮ ನಿರ್ದೇಶಕರು ಜೆಎಫ್ಎಂ ಗಗನ್ ವೇದಿಕೆಯಲ್ಲಿ ಕಿನ್ನಿಕುಮೇರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೇಸಿ ಸುಬ್ರಹ್ಮಣ್ಯ ಕುದ್ಪಾಜೆ ವೇದಿಕೆಗೆ ಆಹ್ವಾನಿಸಿದರು.ಜೇಸಿ ವಾಣಿಯನ್ನು ಜೇಸಿ ಪ್ರವೀಣ್ ಕುಂಜತ್ತಾಡಿ ವಾಚಿಸಿದರು. ಅತಿಥಿಗಳ ಮತ್ತು ತರಬೇತಿದಾರರ ಪರಿಚಯವನ್ನು ಜೇಸಿ ಪ್ರವೀಣ್ ಕುಂಜತ್ತಾಡಿ , ಜೇಸಿ ಸುಬ್ರಹ್ಮಣ್ಯ ಕುದ್ಪಾಜೆ ಮತ್ತು ಜೇಸಿ ಗಗನ್ ಕಿನ್ನಿಕುಮೇರಿ ನೆರವೇರಿಸಿದರು.ಜೇಸಿ ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು.ಕಾರ್ಯಕ್ರಮದಲ್ಲಿ ಜೇಸಿ ಪಂಜ ಪಂಚಶ್ರೀಯ ಸದಸ್ಯರು, ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದರು.