ಹಿರಿಯರಾದ ಕಂಜಲ ನಾವೂರು ರಿಂದ ದೀಪ ಪ್ರಜ್ವಲನೆ
ಸುಳ್ಯ ಶ್ರೀ ಚೆನ್ನಕೇಶವ ಕಲಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಚೆನ್ನಕೇಶವ ದೇವರ ಜಾತ್ರೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮನ್ನು ಭಜನಾ ಕಾರ್ಯಕ್ರಮದ ಮೂಲಕ ಪ್ರಾರಂಭಿಸಲಾಯಿತು.
ನಾವೂರು ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನದ ಹಿರಿಯರಾದ ಕಂಜಲ ನಾವೂರು ರವರು ದೀಪ ಪ್ರಜ್ವಲಿಸಿದರು.
ದೇವಸ್ಥಾನದಲ್ಲಿ ಅರ್ಚಕ ಹರಿಕೃಷ್ಣ ರವರು ಪ್ರಾರ್ಥಿಸಿ ದೀಪ ಬೆಳಗಿ ಜ್ಯೋತಿಯನ್ನು
ಸಂಘದ ಸಂಚಾಲಕ ಜಯಂತ ಶೇಟ್ ರವರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಶ್ರೀ ಚೆನ್ನಕೇಶವ ಮಹಿಳಾ ಭಜನಾ ಮಂಡಳಿ ಹಾಗೂ ಮಹಿಳಾ ಪರಿಷತ್ ಸದಸ್ಯರಿಂದ ಕುಳಿತು ಭಜನೆ ಹಾಗೂ ಸುಳ್ಯದ
ಡಿ ಯುನೈಟೆಡ್
ಮಕ್ಕಳ ಕುಣಿತ ಭಜನಾ ತಂಡದವರಿಂದ ಆಕರ್ಷಕ
ಕುಣಿತ ಭಜನೆಯು ಪ್ರದರ್ಶನವಾಯಿತು.