ಮಡಪ್ಪಾಡಿ ಸೊಸೈಟಿ ಚುನಾವಣೆ

0

ಸಾಮಾನ್ಯ 6 ಸ್ಥಾನಕ್ಕೆ 4 ಕಾಂಗ್ರೆಸ್, 2 ಬಿಜೆಪಿ

ಮಡಪ್ಪಾಡಿ ಸೊಸೈಟಿಗೆ ಇಂದು ನಡೆದ ಚುನಾವಣೆಯಲ್ಲಿ ಸಾಮಾನ್ಯ 6 ಸ್ಥಾನಕ್ಕೆ 4 ಕಾಂಗ್ರೆಸ್, 2 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯರಾಮ ಪಿ.ಸಿ. 412 ಮತಗಳು, ಮಿತ್ರದೇವ ಮಡಪ್ಪಾಡಿ 356, ಸೋಮಶೇಖರ ಕೇವಳ 345, ಚಂದ್ರಶೇಖರ ಗುಡ್ಡೆ 296 ಮತಗಳು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವಿನಯಕುಮಾರ್ ಮುಳುಗಾಡು 350 ಮತಗಳು, ಕರುಣಾಕರ ಪಾರೆಪ್ಪಾಡಿ ೩೪೦ ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕುಸುಮಾಧರ ಕುತ್ಯಾಳ 284 ಮತಗಳು, ಸುನಿಲ್ ಕಡ್ಯ 258 ಮತಗಳು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳಾದ ಆನಂದ ಅಂಬೆಕಲ್ಲು 287 ಮತಗಳು, ಆನಂದ ಕಡ್ಯ 227 ಮತಗಳು, ವಸಂತಕುಮಾರ್ ಹಾಡಿಕಲ್ಲು 216 ಮತಗಳು ಮತ್ತು ಎನ್.ಟಿ. ಹೊನ್ನಪ್ಪ 283 ಮತಗಳನ್ನು ಪಡೆದು ಪರಾಭವಗೊಂಡರು.