ಪ.ಪಂಗಡ ಕೆಟಗೆರಿಯಲ್ಲಿ ವಸಂತ ನಾಯ್ಕ್ , ಪ. ಜಾತಿ ಕೆಟಗೆರಿಯಲ್ಲಿ ಪಕೀರ ಗೆಲುವು
ಕೊಡಗು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆದು ಮತ ಎಣಿಕೆ ನಢಯುತ್ತಿದ್ದು ಪ.ಪಂಗಡ ಕೆಟಗೆರಿಯಲ್ಲಿ ಬಿಜೆಪಿ ಬೆಂಬಲಿತ ವಸಂತ ನಾಯ್ಕ 1001 ಹಾಗೂ ಪ.ಜಾತಿ ಕೆಟಗೆರಿಯಲ್ಲಿ ಬಿಜೆಪಿ ಬೆಂಬಲಿತ ಪಕೀರ 885 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಪ.ಪಂಗಡ ಕೆಟಗೆರಿಯಲ್ಲಿ ಪ್ರತಿಸ್ಪರ್ಧಿ ಗಳಾದ ಕಾಂಗ್ರೆಸ್ ಬೆಂಬಲಿತ ಸತೀಶ್ 419, ಸ್ವತಂತ್ರ ಅಭ್ಯರ್ಥಿ ಹರೀಶ್ ಗುಡ್ಡೆ 110 ಮತ ಪಡೆದು ಪರಾಭವಗೊಂಡರು.
ಪ.ಜಾತಿ ವಿಭಾಗದಲ್ಲಿ ಕಾಂಗ್ರೆಸ್ ಬೆಂಬಲಿತ ಬಾಬು 436, ಸ್ವತಂತ್ರ ಅಭ್ಯರ್ಥಿ ದೇವಪ್ಪ ಕೊಯನಾಡು 193 ಮತ ಪಡೆದರು.