ನರ್ಸಿಂಗ್ ಕಾಲೇಜು ಫಲಿತಾಂಶ: ಕೆವಿಜಿ ನರ್ಸಿಂಗ್ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್

0

ಮೂರನೇ ವರ್ಷದ ಡಿಪ್ಲೋಮಾ ಇನ್ ಜನರಲ್ ನರ್ಸಿಂಗ್ ಮತ್ತು ಮಿಡ್ ವೈಫರಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯದ ಕೆವಿಜಿ ನರ್ಸಿಂಗ್ ಕಾಲೇಜಿನ 7 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಒಟ್ಟು 42 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.


ಅಲ್ಡ್ರೀನ್ ಜೋಸೆಫ್ (ಶೇ.80.5), ಅಲೆಕ್ಸ್ ಜೋಸ್ ಕುಟ್ಟಿ (ಶೇ.81.5), ಅಶ್ವಥಿರಾಜನ್ (ಶೇ.80), ಜೋಸೆಫ್ (ಶೇ.81.75), ಮರಿಯಾ ಎನ್. (ಶೇ.81.5),ಪ್ರಜ್ಞಾ ಎನ್. (ಶೇ.83.25), ಸಮೀಕ್ಷಾ ಬಿ..ಎಸ್. (ಶೇ.85) ಡಿಸ್ಟಿಂಕ್ಷನ್ ಪಡೆದಿದ್ದಾರೆ.