ಕನಕಮಜಲು ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ, ಅಜ್ಜಾವರ ಗ್ರಾಮ ಪಂಚಾಯತ್ ಹೆಚ್ಚುವರಿ ಜವಾಬ್ದಾರಿ ವಹಿಸಿ ಸೇವೆ ಸಲ್ಲಿಸುತ್ತಿದ್ದ ರಮೇಶ್ ಟಿ.ಯವರು ಡಿ.31ರಂದು ಸೇವಾ ನಿವೃತ್ತರಾಗಿದ್ದಾರೆ.
ಬೆಳ್ಳಾರೆ ಗ್ರಾಮದ ತಡೆಗಡೆ ಎಂಬಲ್ಲಿ ಅಣ್ಣಿ ಪೂಜಾರಿ ಮತ್ತು ಶ್ರೀಮತಿ ವೆಂಕಮ್ಮ ಪುತ್ರರಾದ ರಮೇಶ್ ರವರು ವಿದ್ಯಾಭ್ಯಾಸದ ಬಳಿಕ 1988-89ರಲ್ಲಿ ಪೆರುವಾಜೆ, ಬೆಳ್ಳಾರೆ, ಕೊಡಿಯಾಲ ಗ್ರಾಮದ ಗ್ರಾಮಕರಣಿಕರ ಸಹಾಯಕರಾಗಿ ತಾತ್ಕಾಲಿಕವಾಗಿ ಸೇವೆ ಸಲ್ಲಿಸಿ 1989-90ರಿಂದ ಬೆಳ್ಳಾರೆ ಮಂಡಲ ಪಂಚಾಯತ್ ಸಿಬ್ಬಂದಿಯಾಗಿ ಕರ್ತವ್ಯಕ್ಕೆ ಸೇರಿ 2008ರಲ್ಲಿ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮ ಪಂಚಾಯತಿನ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿ ಸರಕಾರಿ ಕರ್ತವ್ಯಕ್ಕೆ ಸೇರ್ಪಡೆಗೊಂಡು, ಬೆಟ್ಟಂಪಾಡಿ, ಕೊಡಿಪ್ಪಾಡಿ, ಕಬಕ ಗ್ರಾಮ ಪಂಚಾಯತಿಯಲ್ಲಿ ಪ್ರಭಾರ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ನಂತರ 17-07-2019ರಿಂದ ಸುಳ್ಯ ತಾಲೂಕಿನ ಕನಕಮಜಲು ಗ್ರಾಮ ಪಂಚಾಯತಿನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಾ ಅಜ್ಜಾವರ ಗ್ರಾಮ ಪಂಚಾಯತಿನ ಕಾರ್ಯದರ್ಶಿಯಾಗಿ ಹೆಚ್ಚುವರಿ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಡಿ.31ರಂದು ಸೇವಾ ನಿವೃತ್ತಿ ಪಡೆದಿದ್ದಾರೆ.