ಕೃಷಿ ಇಲಾಖೆಯಲ್ಲಿ ಕೃಷಿ ಯಾಂತ್ರೀಕರಣ, ತುಂತುರು ನೀರಾವರಿ ಘಟಕ, ಪಿವಿಸಿ ಪೈಪ್ ಹಾಗೂ ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿ ಭಾಗ್ಯ ಯೋಜನೆಯಲ್ಲಿ ವಿವಿಧ ಅಳತೆಗಳಲ್ಲಿ ಕೃಷಿ ಹೊಂಡಗಳಿಗೆ ಶೇ.೮೦ ರಷ್ಟು ಸಹಾಯಧನ ನೀಡಲಾಗುತ್ತದೆ. ಪ.ಜಾತಿ ಹಾಗೂ ಪಂಗಡದವರಿಗೆ ಶೇ.೯೦ರಷ್ಟು ಸಹಾಯಧನ ನೀಡಲಾಗುತ್ತದೆ.
ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಪವರ್ ಸ್ಪ್ರೇಯರ್, ಬ್ರಶ್ ಕಟ್ಟರ್, ಮೋಟೋ ಕಾರ್ಟ್, ಪವರ್ ಟಿಲ್ಲರ್‌ಗಳಿಗೆ ಗರಿಷ್ಟ ಸಹಾಯಧನ ಎಲ್೧ ರಂತೆ ಶೇ.೫೦ ಹಾಗೂ ಪ.ಜಾತಿ ಹಾಗೂ ಪಂಗಡದವರಿಗೆ ಶೇ.೯೦ರಷ್ಟು ಸಹಾಯಧನ ನೀಡಲಾಗುತ್ತದೆ.
ತುಂತುರು ನೀರಾವರಿ ಘಟಕ -ಸ್ಪ್ರಿಂಕ್ಲರ್ ಸೆಟ್/ ಕಪ್ಪು ಪೈಪು (೩೦ ಪೈಪ್ *೫ ಜೆಟ್) ಎಲ್ಲಾ ವರ್ಗದ ರೈತರಿಗೆ ಶೇ.೯೦ ಸಹಾಯಧನ. ಪಿವಿಸಿ ಪೈಪ್ (೬೩ಮಿಮಿ) – ಪಿವಿಸಿ ಪೈಪ್ ೬೩ ಮಿಮೀ – ಗರಿಷ್ಟ ೩೫ ಪೈಪ್ ಪ್ರತಿ ಹೆಕ್ಟೇರಿಗೆ ಎಲ್ಲಾ ವರ್ಗದ ರೈತರಿಗೆ ಶೇ.೫೦ ಸಹಾಯಧನ. ಅರ್ಜಿ ಸಲ್ಲಿಸಲು ಜ.೩೦ ಕೊನೆಯ ದಿನವಾಗಿದೆ. ಪೂರ್ಣ ದಾಖಲಾತಿಗಳೊಂದಿಗೆ (ಪಹಣಿ, ಪಾಸ್ ಪೋರ್ಟ್ ಸೈಜ್ ಫೋಟೊ, ಬ್ಯಾಂಕ್ ಪಾಸ್ ಪುಸ್ತಕಮತ್ತು ಆಧಾರ್ ನಕಲು ಪ್ರತಿ, ಜಾತಿ ಪ್ರಮಾಣ ಪತ್ರ (ಪ.ಜಾತಿ, ಪ.ಪಂ) ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಸುಳ್ಯ ಇಲ್ಲಿ ಸಂಪರ್ಕಿಸಬಹುದಾಗಿದೆ.