ಮಂಡೆಕೋಲು ಗ್ರಾಮದ ಪೇರಾಲಿಗೆ ಬರುವ ಬಸ್ ಅಡ್ಪಂಗಾಯದ ತನಕ ಬರಬೇಕೆಂದು ಈ ಭಾಗದವರು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಅಬ್ಬಾಸ್ ಅಡ್ಕರವರ ನೇತೃತ್ವದಲ್ಲಿ ಸುಳ್ಯ ಕೆ.ಎಸ್.ಆರ್.ಟಿ.ಸಿ. ಡಿಪ್ಪೋ ಮ್ಯಾನೇಜರ್ ರಿಗೆ ಮನವಿ ಮಾಡಿದ್ದರು.
ಜ.3ರಂದು ಪೇರಾಲಿಗೆ ಬಂದ ಬಸ್ ಅಡ್ಪಂಗಾಯ ತನಕ ಬಂದು ವಾಪಸು ಪೇರಾಲು ಮಾರ್ಗವಾಗಿ ಸುಳ್ಯಕ್ಕೆ ಬಂತು. ಈ ಸಂದರ್ಭದಲ್ಲಿ ಬಸ್ ನ ಆಗಮನವನ್ನು ಊರವರಿದ್ದು ಬರಮಾಡಿಕೊಂಡರು.