ನಿಂತಿಕಲ್ಲು ಧರ್ಮಶ್ರೀ ಆರ್ಕೇಡ್ ನಲ್ಲಿರುವ ಶ್ರೀದೇವಿ ಅಗ್ರಿಟೆಕ್
ಇದರ ಸಹಯೋಗದ ಸಂಸ್ಥೆ
ಶ್ರೀದೇವಿ ಪೆಸ್ಟಿಸೈಡ್ (ಕೀಟನಾಶಕ) ಅಗ್ರಿಟೆಕ್ ಇದರ ಶುಭಾರಂಭ ನಿಂತಿಕಲ್ಲು ಧರ್ಮಶ್ರೀ ಆರ್ಕೇಡ್ ಸಂಕೀರ್ಣದಲ್ಲಿ ಜ.8 ರಂದು ಪೂರ್ವಾಹ್ನ ಗಂಟೆ 10-30ಕ್ಕೆ ಜರುಗಲಿದೆ.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ,
ಉದ್ಘಾಟಿಸಲಿದ್ದಾರೆ.ಪ್ರಗತಿ ಪರ ಕೃಷಿಕ ಪದ್ಮನಾಭ ರೈ ಎಂಜೀರು ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಎಣ್ಮೂರು ಶ್ರೀ ಆದಿಬ್ರಹ್ಮ ಕೋಟಿ ಚೆನ್ನಯ ಗರಡಿಯ ಅನುವಂಶಿಕ ಆಡಳಿತ ಮೊಕ್ತೇಸರ ರಾಮಕೃಷ್ಣ ಶೆಟ್ಟಿ ಕಟ್ಟಬೀಡು,
ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ ಹೊಳಲ್ಕೆರೆ ಇದರ ಜನರಲ್ ಮ್ಯಾನೇಜರ್ ಎಂ. ಶರ್ಮ, ಪ್ರಗತಿ ಪರ ಕೃಷಿಕ ಮೋಹನ್‌ದಾಸ್ ಕೂಟಾಜೆ ಗೌರವ ಉಪಸ್ಥಿತರಿರುವರು .ಮುಖ್ಯ ಅತಿಥಿಗಳಾಗಿ ನಿಂತಿಕಲ್ಲು ಧರ್ಮಶ್ರೀ ಆರ್ಕೇಡ್ ಮಾಲಕ ಎಂ. ಮಾಧವ ಗೌಡ ಕಾಮಧೇನು, ಸುಬ್ರಹ್ಮಣ್ಯ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್. ರೈ ಪುಡ್ಕಜೆ, ಮಂಗಳೂರು ವಕೀಲ ರಾಧಾಕೃಷ್ಣ ರೈ ಎಣ್ಮೂರು , ಪ್ರಗತಿ ಕೃಷಿಕರಾದ ಎನ್ ಗಣೇಶ್ ನಿಡ್ವಣ್ಣಾಯ, ಎನ್. ಜಿ. ಲೋಕನಾಥ ರೈ, ಸುಬ್ಬರಾವ್ ಪೈಲೂರು ಚೊಕ್ಕಾಡಿ, ಬಾಲಕೃಷ್ಣ ರೈ ಪೊಯ್ಯೋತ್ತೂರು ಪಾಲ್ಗೊಳ್ಳಲಿದ್ದಾರೆ. ಎಂದು ಸಂಸ್ಥೆಯ ಮಾಲಕರಾದ
ಶ್ರೀಮತಿ ಮಾಲತಿ ಟಿ. ರೈ ಮತ್ತು ಬಿ. ಜಿ. ತಿಮ್ಮಪ್ಪ ರೈ ಬಜದಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.