ಗೌರವ ಸಮರ್ಪಣೆ – ನೂತನ ಪದಾಧಿಕಾರಿಗಳ ರಚನೆ
ಅಧ್ಯಕ್ಷರಾಗಿ ದಿವ್ಯ ಸುಜನ್ ಗುಡ್ಡೆಮನೆ ಮರು ಆಯ್ಕೆ
ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ೨೦೨೩-೨೦೨೪ ನೇ ವಾರ್ಷಿಕ ಮಹಾಸಭೆ ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜ. ೪ರಂದು ನಡೆಯಿತು. ಪಂಚಾಯತ್ ಹಿರಿಯ ಸದಸ್ಯರಾದ ಶ್ರೀಮತಿ ಶಾರದ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ತಾಲೂಕು ವಲಯ ಮೇಲ್ವಿಚಾರಕ ಮಹೇಶ್ ಪ್ರಾಸ್ತಾವಿಕ ಮಾತನಾಡಿ ಒಕ್ಕೂಟ ರಚನೆ ಹಾಗು ಸಂಜೀವಿನಿ ಯೋಜನೆಯ ಬಗ್ಗೆ ತಿಳಿಸಿದರು. ನಂತರ ಒಕ್ಕೂಟ ನಡೆದು ಬಂದ ಹಾದಿಯ ಬಗ್ಗೆ ಸವಿಸ್ತಾರ ಮಾಹಿತಿ ವರದಿ ಹಾಗೂ ಲೆಕ್ಕ ಪರಿಶೋಧನೆ ಯ ವರದಿಯನ್ನು ಒಕ್ಕೂಟದ ಕಾರ್ಯದರ್ಶಿ ಹಾಗು ಎಂ.ಬಿ.ಕೆ ಸಭೆಯಲ್ಲಿ ಮಂಡಿಸಿದರು. ಒಕ್ಕೂಟದ ಯಶಸ್ವಿ ಚಟುವಟಿಕೆಯ ಬಗ್ಗೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಗೌರವ ಸಮರ್ಪಣೆ ಹಾಗು ಸನ್ಮಾನ
ವಾರ್ಷಿಕ ಸಭೆಯಲ್ಲಿ ಒಕ್ಕೂಟದ ಪೂರ್ವಾಧ್ಯಕ್ಷೆ ಶ್ರೀಮತಿ ರವಿಕಲಾ ಚೆಮ್ನೂರು ಇವರನ್ನು ಒಕ್ಕೂಟಕ್ಕೆ ನೀಡಿದ ಸೇವೆ ಹಾಗು ಸಮಾಜಮುಖಿ ಸೇವೆಗಳಿಗಾಗಿ ಗುರುತಿಸಿ ಗೌರವಿಸಲಾಯಿತು.
ಒಕ್ಕೂಟ ಸಮುದಾಯ ಬಂಡವಾಳದಿಂದ ಸಾಲ ಪಡೆದು ಕೋಳಿ ಸಾಕಾಣಿಕೆ ಮಾಡಿ ಸ್ವ ಉದ್ಯಮ ನಡೆಸಿ ಉತ್ತಮ ಆದಾಯ ಪಡೆದು ಯಶಸ್ವಿಯಾದ ಇಂಚರ ಸಂಘದ ಸದಸ್ಯೆ ಪ್ರೇಮ ಲತಾ ಚಿಕ್ಮುಳಿ ಇವರನ್ನು ಒಕ್ಕೂಟದ ಯಶಸ್ವಿ ಸಾಧಕ ಮಹಿಳೆ ಎಂದು ಗುರುತಿಸಿ ಅಭಿನಂದಿಸಲಾಯಿತು .
ಪಿ.ಯಂ.ಶ್ರೀ ಸ.ಮಾ.ಹಿ.ಪ್ರಾ ಶಾಲೆ ಗುತ್ತಿಗಾರು ಇಲ್ಲಿನ ಶಾಲಾ ವಿದ್ಯಾರ್ಥಿ ಎತ್ತರ ಜಿಗಿತ ಸ್ಪರ್ಧೆ ಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಗ್ರಾಮೀಣ ಪ್ರತಿಭೆ ವಿವೇಕ್ ಎರ್ದಡ್ಕ ಇವರನ್ನು ಕ್ರೀಡಾ ಸಾಧನೆಯ ಚಟುವಟಿಕೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಅಭಿನಂದಿಸಲಾಯಿತು.
ಒಕ್ಕೂಟದ ಸಮಗ್ರ ನಿರ್ವಹಣೆ ಮಾಡುತ್ತಿರುವ ಸಂಜೀವಿನಿ ಮುಖ್ಯ ಪುಸ್ತಕ ಬರಹಗಾರರು(ಒಃಏ) ಶ್ರೀಮತಿ ಮಿತ್ರಕುಮಾರಿ ಚಿಕ್ಮುಳಿ ಹಾಗು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ(ಐಅಖP) ಇವರುಗಳನ್ನು ಒಕ್ಕೂಟಕ್ಕೆ ನೀಡುತ್ತಿರುವ ಉತ್ತಮ ಸೇವೆಗಾಗಿ ಗೌರವಿಸಲಾಯಿತು.
ಒಕ್ಕೂಟದಲ್ಲಿ ಉತ್ತಮ ಚಟುವಟಿಯೊಂದಿಗೆ ಗುರುತಿಸಿಕೊಂಡ ಸಂಘ ಸ್ವಸ್ತಿಕ್ ಸಂಘ ವನ್ನು ಉತ್ತಮ ಸಂಘ ಎಂದು ಆಯ್ಕೆ ಮಾಡಿ ಗುರುತಿಸಿ ಗೌರವಿಸಲಾಯಿತು.
ಜವಾಬ್ದಾರಿ ಸಂಘಗಳ ಗುರುತಿಸುವಿಕೆ
ಒಕ್ಕೂಟದ ತ್ರೈಮಾಸಿಕ ಸಭೆಗಳಲ್ಲಿ ಸಭೆಯ ಸಂಪೂರ್ಣ ಜವಾಬ್ದಾರಿ ವಹಿಸಿ ಆ ಸಭೆಯ ನಿರ್ವಹಣೆ ಹಾಗು ಉಪಹಾರ ಪಾನೀಯಗಳನ್ನು ತಮ್ಮ ಸಂಘದ ನೆಲೆಯಲ್ಲಿ ನೀಡಿ ಸಭೆಯ ಜವಾಬ್ದಾರಿ ವಹಿಸಿದ ಸಂಘಗಳಾದ ಸಿದ್ಧಿದಾತ್ರಿ,ದೀಪ,ಇಂಚರ,ಚಿಗುರು, ಯಶಸ್ವಿ, ಆರಾದ್ಯ ಇವರುಗಳನ್ನು ಗುರುತಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಹಾಗೂ ವಾರ್ಷಿಕ ಮಹಾಸಭೆಯ ಜವಾಬ್ದಾರಿ ವಹಿಸಿದ ಮಾತೃಶ್ರೀ ಸಂಘವನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ನೂತನ ಪದಾಧಿಕಾರಿಗಳ ರಚನೆ
ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ರಚನೆಯ ಬಗ್ಗೆ ಕಾರ್ಯಸೂಚಿಯ ಮೂಲಕ ತಿಳಿಸಿ ಪದಾಧಿಕಾರಿಗಳ ಆಯ್ಕೆಯ ಬಗ್ಗೆ ವಲಯ ಮೇಲ್ವಿಚಾರಕ ಶ್ರೀ ಅವಿನಾಶ್ ಮಾತನಾಡಿ ಪದಾಧಿಕಾರಿಗಳ ಜವಾಬ್ದಾರಿ ನಿರ್ವಹಣೆಯ ಬಗ್ಗೆ ತಿಳಿಸಿದರು. ನಂತರ ಸಭೆಯ ಒಕ್ಕೊರಲ ಸಂಪೂರ್ಣ ಸಹಮತದಿಂದ ಹಿಂದಿನ ಅಧ್ಯಕ್ಷರಾದ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ಇವರನ್ನು ಒಕ್ಕೂಟದ ಅಧ್ಯಕ್ಷರಾಗಿ ಮರುಆಯ್ಕೆ ಮಾಡಲಾಯಿತು. ಹಾಗೂ ಇದೇ ಪದಾಧಿಕಾರಿಗಳ ತಂಡವನ್ನು ಕೆಲವು ಬದಲಾವಣೆಗಳೊಂದಿಗೆ ಮುಂದುವರೆಸುವಂತೆ ಸಭೆಯ ಒಮ್ಮತದ ತೀರ್ಮಾನವಾಯಿತು.
ನಂತರ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ ಒಕ್ಕೂಟದ ಚಟುವಟಿಕೆ ಬಗ್ಗೆ ಹೇಳಿ ಜಿಲ್ಲೆಯಲ್ಲಿ ಮಾದರಿ ಒಕ್ಕೂಟಕ್ಕೆ ಆಯ್ಕೆಯಾದ ಅಮರ ಸಂಜೀವಿನಿ ಒಕ್ಕೂಟ ಇನ್ನೂ ಹೆಚ್ಚೆಚ್ಚು ಚಟುವಟಿಕೆಯನ್ನು ನಡೆಸುವಂತೆ ಪ್ರೇರೇಪಿಸಿದರು. ಪಂಚಾಯತ್ ಸದಸ್ಯ ವಿಜಯ್ ಕುಮಾರ್ ಚಾರ್ಮತ ಇವರು ಮಾತಾಡಿ ಒಕ್ಕೂಟವು ಮಾಡುವಂತ ಎಲ್ಲಾ ಕಾರ್ಯಕ್ರಮ ಕ್ಕೆ ಪಂಚಾಯತ್ ಅಡಳಿತ ಮಂಡಳಿ ಯು ಸಂಪೂರ್ಣ ಸಹಕಾರ ಇದೆ ಎಂದು ಪ್ರೋತ್ಸಾಹಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಧನಪತಿ ಮಾತನಾಡಿ ಒಕ್ಕೂಟ ನಡೆಸುತ್ತಿರು ಉತ್ತಮ ಚಟುವಟಿಕೆ ಹಾಗು ಸ್ವಚ್ಚತಾ ಸೇವೆಯ ಬಗ್ಗೆ ಶ್ಲಾಘಿಸಿದರು.
ಸಭಾ ವೇದಿಕೆ ಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಭಾರತಿ ಸಾಲ್ತಡಿ ಪಂಚಾಯತ್ ಹಿರಿಯ ಸದಸ್ಯೆ ಶಾರದಾ.ಎಂ.ಕೆ,ಲತಾಕುಮಾರಿ ಆಜಡ್ಕ, ಅಭಿವೃದ್ಧಿ ಅಧಿಕಾರಿ ಧನಪತಿ ಹಾಗೂ ೨೦೨೩-೨೦೨೪ ವಾರ್ಷಿಕ ಮಹಾಸಭೆ ಅಧ್ಯಕ್ಷರು ದಿವ್ಯ ಸುಜನ್ ಗುಡ್ಡೆಮನೆ ಗುಡ್ಡೆಮನೆ ಉಪಾಧ್ಯಕ್ಷರು ಸವಿತಾ ಕುಳ್ಳಂಪಾಡಿ. ಕಾರ್ಯದರ್ಶಿ ಯಮಿತಾ ಪೂರ್ಣಚಂದ್ರ, ಕೋಶಾಧಿಕಾರಿ ಸೆಲಿನಾ ಸೆಬಾಸ್ಟಿನ್ ಜತೆ ಕಾರ್ಯದರ್ಶಿ ಗೀತಾಶ್ರಿ ವಳಲಂಬೆ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ, ಸುಳ್ಯ ಟಿಡಿಟm ಮೇಲ್ವಿಚಾರಕರು ಮಹೇಶ್ , ಅವಿನಾಶ್ , ಬ್ಲಾಕ್ ಮೇನೇಜರ್ ಮೇರಿ ಹಾಗೆಯೇ ತಾಲೂಕು ಪಂಚಾಯಿತಿಯಲ್ಲಿ ಹೊಸದಾಗಿ ಆಯ್ಕೆಯಾದ ಕೃಷಿ ಜೀವನೋಪಾಯ ವ್ಯವಸ್ಥಾಪಕ ಜೀವನ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಿಜಿಟಲ್ ಸಾಕ್ಷರತೆ ಹಾಗು ಬ್ಯಾಂಕ್ ಮಾಹಿತಿ
ಸರಕಾರದ ಆದೇಶದಂತೆ ಸ್ವಸಹಾಯ ಸಂಘದ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತೆ ಮಹತ್ವದ ಬಗ್ಗೆ ಗುತ್ತಿಗಾರು ಗ್ರಂಥಾಲಯ ಅರಿವು ಕೇಂದ್ರ ಮೇಲ್ವಿಚಾರಕಿ ಶ್ರೀಮತಿ ಅಭಿಲಾಷ ಮೋಟ್ನೂರು ತಿಳಿಸಿ ಈಗಾಗಲೇ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರವನ್ನು ಪಿಡಿಒ ಮೂಲಕವಾಗಿ ವಿತರಿಸಿದರು.
ಕೆನರಾ ಬ್ಯಾಂಕ್ ಅಮೂಲ್ಯ ಸಾಕ್ಷರತಾ ಆಪ್ತ ಸಮಾಲೋಚಕಿ ಶ್ರಮತಿ ಸುಜಾತ ಬ್ಯಾಂಕ್ ನಿಂದ ಸ್ವಸಹಾಯ ಸಂಘಗಳಿಗೆ ಇರುವ ಸವಲತ್ತುಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಗ್ರಾಮಪಂಚಾಯತ್ ಸದಸ್ಯರುಗಳು ಪ್ರಮೀಳಾ ಬಾಸ್ಕರ ಎರ್ದಡ್ಕ,ಲೀಲಾವತಿ,ಗುತ್ತಿಗಾರು ನಾಲ್ಕೂರು ವ್ಯಾಪ್ತಿಯ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು ಪಂಚಾಯತ್ ಸಿಬ್ಬಂದಿಗಳು,ಕೃಷಿಸಖಿ ಸುಪ್ರೀತಾ ಬೊಳ್ಳೂರು,ಪಶುಸಖಿ ಚೈತನ್ಯ, ಅಂಗನವಾಡಿ ಕಾರ್ಯಕರ್ತೆಯರು,ಆಶಾಕಾರ್ಯಕರ್ತೆಯರು,ಆರೋಗ್ಯ ಇಲಾಖೆ ಯವರು ಹಾಜರಿದ್ದರು. ಶಿಸಿಮ ಜಾಕೆ ಸ್ವಾಗತಿಸಿ, ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ ವಂದಿಸಿದರು. ಇಂಚರ ಸಂಘದ ಸದಸ್ಯೆಯರು ಪ್ರಾರ್ಥಿಸಿದರು. ಸ್ವಸ್ತಿಕ್ ಸಂಘದ ಸದಸ್ಯೆ ತೇಜೆಶ್ವರಿ ಕಾರ್ಯಕ್ರಮ ನಿರೂಪಿಸಿದರು.