ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಮತ್ತು ಜನಮನ ಪ್ರಸ್ತುತಪಡಿಸುವ ಸಂಗೀತೋತ್ಸವ ‘ಅಸೀಮ’ ಜ. 5ರಂದು ಸಂಜೆ ಜ್ಞಾನಗಂಗಾ ಶಾಲಾ ಆವರಣದಲ್ಲಿ ನಡೆಯಿತು.
ಸಂಸ್ಥೆಯ ಸಂಚಾಲಕರಾದ ಎಂ.ಪಿ. ಉಮೇಶ್, ಶ್ರೀಮತಿ ಕೆ.ಜಿ. ರಜನಿ, ಮನಜನ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಸೌಮ್ಯ, ಶ್ರೀಮತಿ ಮೀನಾ ಕೃಷ್ಣಮೂರ್ತಿ, ಪ್ರಹ್ಲಾದ್ ಟಿಪಾಣಿಯಾ ಸಂಸ್ಥೆಯ ಪ್ರಾಂಶುಪಾಲೆ ದೇಚಮ್ಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿ ಅಹನ್ ವೆಂಕಟ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಶಾನ್ವಿ ಮತ್ತು ಆಪ್ತಿಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ
ಪ್ರಸಿದ್ಧ ಸಂಗೀತಗಾರರಾದ ಪ್ರಹ್ಲಾದ್ ಟಿಪಾಣಿಯಾ ಮತ್ತು ತಂಡ ಹಾಗೂ ಮೀರ್ ಬಸು ಮತ್ತು ತಂಡ ಸಂಗೀತೋತ್ಸವ ನಡೆಸಿಕೊಡಲಿದ್ದಾರೆ