ಜ.2-5: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವವು ಜ.೨ರಿಂದ ಜ.೫ರವರೆಗೆ ಧಾರ್ಮಿಕ ಉಪನ್ಯಾಸ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಜ.೨ರಂದು ಸಂಜೆ ಧರ್ಮ ಸಮ್ಮೇಳನ ಸಭಾ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆ ನೆರವೇರಿಸುವರು. ಶಾಸಕಿ ಕು. ಭಾಗೀರಥಿ ಮುರುಳ್ಯ ಸಭಾಧ್ಯಕ್ಷತೆ ವಹಿಸಲಿದ್ದಾರೆ.


ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕ್ಕಳ, ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಜಾತ ಭಾಗವಹಿಸಲಿದ್ದಾರೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಅಂಕುಶ್ ಎನ್. ನಾಯಕ್ ಮತ್ತು ಬಳಗದವರಿಂದ ಸಿತಾರ್ ವಾದನ ನಡೆಯುವುದು. ವಿದ್ವಾನ್ ಹರಿಪ್ರಸಾದ್ ಸುಬ್ರಹ್ಮಣ್ಯಂ, ಕೊಚ್ಚಿನ್ ಕೇರಳ ಇವರಿಂದ ಕೊಳಲು ವಾದನ ನಡೆಯುವುದು. ರಾತ್ರಿ ಡ್ಯಾನ್ಸ್ ಬೀಟ್ಸ್, ಸುಬ್ರಹ್ಮಣ್ಯ, ಬೆಳ್ಳಾರೆ, ಪಂಜ ಮತ್ತು ಕೈಕಂಬ ಶಾಖೆಯ ಮಕ್ಕಳಿಂದ ನೃತ್ಯ ಸಂಭ್ರಮ ನಡೆಯುವುದು. ಬಳಿಕ ಮನೋಜ್‌ಕುಮಾರ್, ಪೂಕುನ್ನತ್, ಪೊಯಿನಾಚಿ, ಕಾಸರಗೋಡು ಇವರಿಂದ ಸ್ವರ ರಾಗಂ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯುವುದು. ಜ.೩ರಂದು ಸಂಜೆ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ, ಕಳಂಜ, ಬೆಳ್ಳಾರೆ ಪ್ರಸ್ತುತ ಪಡಿಸುವ ನೃತ್ಯ ಸಂಭ್ರಮ. ಬಳಿಕ ಆರಾಧನಾ ನೃತ್ಯ ಕೇಂದ್ರ, ಮೂಡಬಿದರೆಯ ವಿದುಷಿ ಶ್ರೀಮತಿ ಸುಖದಾ ಬರ್ವೆ ಇವರ ಶಿಷ್ಯವೃಂದದವರಿಂದ ನೃತ್ಯ ಸಿಂಚನ.


ರಾತ್ರಿ ನಟರಾಜ ಎಂಟರನರ್ಸ್ ಅರ್ಪಿಸುವ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯುವುದು.


ಜ.೪ರಂದು ಸಂಜೆ ಶ್ರೀಮತಿ ನೇಹಾ ರಕ್ಷಿತ್, ಮಂಗಳೂರು ಇವರಿಂದ ಭಾವ – ಭಕ್ತಿ ಸಿಂಚನ. ಬಳಿಕ ಸಂಗೀತ ಕಲಾ ಆಚಾರ್ಯ, ಸ್ವರರತ್ನ ವಿದ್ವಾನ್ ಶ್ರೀ ವಿಠಲ ರಾಮಮೂರ್ತಿ, ಚೆನ್ನೈ ಇವರಿಂದ ವಯಲಿನ್ ವಾದನ ಕಛೇರಿ. ರಾತ್ರಿ ವಿದ್ವಾನ್ ಹರಿಕೃಷ್ಣನ್, ಎರ್ನಾಕುಲಂ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ. ಬಳಿಕ ಶ್ರೀದೇವಿ ಮಹಿಳಾ ಯಕ್ಷ ತಂಡ, ಬಾಲವನ, ಪುತ್ತೂರು ಇವರಿಂದ ಮಾತೃ
ದರ್ಶನ ಷಣ್ಮುಖ ವಿಜಯ ಯಕ್ಷಗಾನ ನಡೆಯುವುದು. ಜ. ೦೫ರಂದು ಸಂಜೆ ವಿಶ್ವ ದಾಖಲೆ ಮಾಡಿದ ಯೋಗ ಪಟು ಕು. ಗೌರಿತಾ ಕೆ.ಜಿ. ಅವರಿಂದ ಯೋಗ ನೃತ್ಯ ಕಾರ್ಯಕ್ರಮ. ಬಳಿಕ ಸನಾತನ ನಾಟ್ಯಾಲಯ, ಮಂಗಳೂರಿನ ಕರ್ನಾಟಕ ಕಲಾಶ್ರೀ ವಿದುಷಿ ಶಾರದಮಣಿ ಶೇಖರ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯವೃಂದದವರು ಪ್ರಸ್ತುತಪಡಿಸುವ ಸನಾತನ ನೃತ್ಯಾಂಜಲಿ ಕಾರ್ಯಕ್ರಮ. ರಾತ್ರಿ ವಿದುಷಿ ಡಾ| ಸುಚಿತ್ರ ಹೊಳ್ಳ ಇವರ ಶಿಷ್ಯ ಕು ಅವನಿ ನಾಯಕ್ ಪುತ್ತೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ. ರಾತ್ರಿ ಕೌಸ್ತುಭ ಕಲಾ ಸೇವಾ ಟ್ರಸ್ಟ್ ಕೂಜುಗೋಡು ಇವರಿಂದ ಶ್ರೀರಾಮ ದರ್ಶನ ಮಕ್ಕಳ ಯಕ್ಷಗಾನ. ಬಳಿಕ ಕಲಾಗ್ರಾಮ ಕಲ್ಮಡ್ಕ ಪ್ರಸ್ತುತ ಪಡಿಸುವ ಡಾ| ಶಿವರಾಮ ಕಾರಂತರ ನೈಜ ಕಥೆ ಕಾದಂಬರಿ ಆಧಾರಿತ ಚೋಮನ ದುಡಿ ತುಳು ನಾಟಕ ಪ್ರಸ್ತುತಗೊಳ್ಳುವುದು. ಸಂಜೆ ಗಂಟೆ ೬-೩೦ರಿಂದ ಶ್ರೀ ಸುಬ್ರಹ್ಮಣ್ಯ ದೇವರ ರಥೋತ್ಸವ ನಡೆಯುವುದು.