ಮೊಗರ್ಪಣೆ ಉರೂಸ್ ಸಮಾರಂಭದ ಪ್ರಚಾರ ಪತ್ರ ಬಿಡುಗಡೆ

0

ಮೊಗರ್ಪಣೆ ಮಾಂಬ್ಳಿ ತಂಗಳ್ ರವರ ಉರೂಸ್ ಸಮಾರಂಭ ಜ. 12 ರಿಂದ 15 ರ ತನಕ ನಡೆಯಲಿದ್ದು, ಇದರ ಪ್ರಚಾರ ಪತ್ರವನ್ನು ಇಂದು ಜುಮಾ ನಮಾಜ್ ಬಳಿಕ ಬಿಡುಗಡೆಗೊಳಿಸಲಾಯಿತು.

ಸ್ಥಳೀಯ ಮುದರ್ರಿಸ್ ಹಾಫಿಲ್ ಸೌಖತ್ ಅಲಿ ಸಖಾಫಿ ರವರು ದರ್ಗಾ ಝಿಯಾರತ್ ಪ್ರಾರ್ಥನೆ ನಡೆಸಿ ಉರೂಸ್ ಸಮಾರಂಭದ ಯಶಸ್ವಿಗೆ ಪ್ರಾರ್ಥಿಸಿದರು.
ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ಪ್ರಚಾರ ಪತ್ರವನ್ನು ಬಿಡುಗಡೆ ಗೊಳಿಸಿದರು.


ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉರೂಸ್ ಸ್ವಾಗತ ಸಮಿತಿ ಕಂನ್ವಿನರ್ ಹಾಜಿ ಅಬ್ದುಲ್ ರಝಕ್ ಶೀತಲ್, ಹಾಗೂ ಜಂಟಿ ಸಮಿತಿ ಪದಾಧಿಕಾರಿಗಳು,ಸದಸ್ಯರು ಗಳು, ಮುಅಲ್ಲಿಮ್ಮರು, ಹಾಗೂ ಜಮಾಅತ್ ಸದಸ್ಯರುಗಳು ಉಪಸ್ಥಿತರಿದ್ದರು.