ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ:ಸಮನ್ವಯ ರಂಗದಿಂದ 11 ಮಂದಿ ನಾಮಪತ್ರ ಸಲ್ಲಿಕೆ

0

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರುಗಳ ಆಯ್ಕೆಗೆ ಮತದಾನ ಜ.15 ರಂದು ನಡೆಯಲಿದೆ.

ಜ.3ರಿಂದ ಜ.7ರ ತನಕ ಬೆಳಿಗ್ಗೆ ಗಂಟೆ 11 ರಿಂದ ಮಧ್ಯಾಹ್ನ ಗಂಟೆ 1 ರ ತನಕ ನಾಮ ಪತ್ರ ಸಲ್ಲಿಕೆಗೆ ಅವಕಾಶ ಇರುತ್ತದೆ.

ಪಿ ಉದಯ ಕುಮಾರ್ ಬೆಟ್ಟ ರವರ ನೇತೃತ್ವದಲ್ಲಿ ಸಮನ್ವಯ ರಂಗದ ವತಿಯಿಂದ 11ಸ್ಥಾನಗಳಿಗೆ ನಾಮ ಪತ್ರ ಸಲ್ಲಿಕೆಯಾಗಿದೆ.ಸಾಮಾನ್ಯ ಸ್ಥಾನಕ್ಕೆ ಪಿ ಉದಯಕುಮಾರ್ ಬೆಟ್ಟ, ನಾರಾಯಣ ಕೆ ಕೆ ಹೊಳಕ್ಕರೆ, ಹರೀಶ್ ಎಂ ಮಾಳಪ್ಪಮಕ್ಕಿ, ವೆಂಕಪ್ಪ ನಾಯ್ಕ ಮಂಞನಕಾನ, ಅಶೋಕ್ ಗೋಳ್ತಾಜೆ, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ವಿಶ್ವನಾಥ ಬೊಳಿಯೂರು, ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ರಾಮ ನಾಯ್ಕ ಉಡುವೆಕೋಡಿ,ಹಿಂದುಳಿದ ವರ್ಗ ಪ್ರವರ್ಗ ಎ ಸ್ಥಾನಕ್ಕೆ ಮಹಮ್ಮದ್ ಹನೀಫ್ ಕೆ ಕರಿಕಳ, ,ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನ ಮಹೇಶ್ ಆಕ್ರಿಕಟ್ಟೆ ,ಮಹಿಳಾ ಮೀಸಲು ಸ್ಥಾನಕ್ಕೆ ಸುಧಾ ಎಸ್ ಭಟ್ ಮೇಲಿನಮನೆ, ಮೋಹಿನಿ ಕುಳ್ಸಿಗೆ ನಾಮ ಪತ್ರ ಸಲ್ಲಿಸಿದ್ದಾರೆ.