ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ

0

ಡಾ. ರೇಣುಕಾ ಪ್ರಸಾದ್ ಗೌರವ ಉಪಸ್ಥಿತಿ, ಸನ್ಮಾನ

ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿಸೆಂಬರ್ 29ರಂದು ನಡೆಯಿತು.
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ ವಿ. ಭಾಗವಹಿಸಿದ್ದರು.


ಪೂಜಾ ಕಾರ್ಯಕ್ರಮ ನಡೆದ ನಂತರ ಸಭಾ ಕಾರ್ಯಕ್ರಮ ನಡೆಯಿತು.
ಡಾ. ರೇಣುಕಾ ಪ್ರಸಾದ್ ರವರು ಮಾತನಾಡಿ, ಅಲ್ಲಿಯ ಗೌಡ ಸಮುದಾಯದ ಸಂಘಟನೆ ಮತ್ತು ಅವರ ಕಾರ್ಯಕರ್ತರ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬಂಟ್ವಾಳ ತಾಲೂಕು ಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಎಂಬಿ ಫೌಂಡೇಶನ್ ಇದರ ಅಧ್ಯಕ್ಷ ಎಂ ಬಿ ಸದಾಶಿವರ ರವರು ಪ್ರಧಾನ ಉಪನ್ಯಾಸಕರಾಗಿ ಉಪಸ್ಥಿತರಿದ್ದರು.


ಮುಖ್ಯ ಅತಿಥಿಗಳಾಗಿ ಜಿಲ್ಲಾ ಗೌಡರ ಒಕ್ಕಲಿಗರ ಮಾತ್ರ ಸಂಘ ಮಂಗಳೂರು ಇದರ ಅಧ್ಯಕ್ಷ ಲೋಕಯ್ಯಗೌಡ, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಗಿರಿಯಪ್ಪ ಗೌಡ ಕಾಂತಿಲ, ಮಹಿಳಾ ಘಟಕ ವಿಟ್ಲ ಇದರ ಅಧ್ಯಕ್ಷ ಶ್ರೀಮತಿ ಅಮಿತಾ ಕೃಷ್ಣ ಕುಡಿಪ್ಪಾಡಿ, ಯುವ ವೇದಿಕೆ ವಿಠಲ ಇದರ ಅಧ್ಯಕ್ಷ ದಿನೇಶ್ ಗೌಡ ಮಾಡ್ಪೇಲು, ಬಂಟ್ವಾಳ ತಾಲೂಕು ಗೌಡರ ಒಕ್ಕಲಿಗರ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿ ಮೊದಲ ಸಲ ಬಂಟ್ವಾಳಕ್ಕೆ ಆಗಮಿಸಿದ ಡಾ. ರೇಣುಕಾ ಪ್ರಸಾದ್ ರವರನ್ನು ಗೌಡರ ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಲಾಯಿತು.