ಕಾಂಗ್ರೆಸ್ ಬೆಂಬಲಿತ 9 ಮಂದಿ ನಾಮಪತ್ರ ಸಲ್ಲಿಕೆ
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜ.16 ರಂದು ನಡೆಯಲಿದೆ.
ಜ.6 ಮತ್ತು ಜ.7 ರಂದು 9 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.ಸಾಮಾನ್ಯ ಸ್ಥಾನಕ್ಕೆ ಭವಾನಿ ಶಂಕರ್ ತೋಟ, ಸದಾಶಿವ ಎಣ್ಣೆಮಜಲು, ಚಂದ್ರಕಾಂತ ಬಳ್ಪ,ಸಾಂತಪ್ಪ ಚೆನ್ನಕಜೆ, ಮಹಿಳಾ ಮೀಸಲು ಸ್ಥಾನಕ್ಕೆ ವೇದಾವತಿ ಕೊರಪ್ಪಣೆ, ಚಿತ್ರಾವತಿ ಕಾಯಂಬಾಡಿ, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಸಮಿತ್ ಪೋಳೆ, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಲಿಂಗಪ್ಪ.ಎನ್, ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಚಂದ್ರಶೇಖರ ನಾಯ್ಕ ಬಸ್ತಿಕಾಡು ನಾಮಪತ್ರ ಸಲ್ಲಿಸಿದ್ದಾರೆ.
ಜ.4 ರಂದು ಕಾಂಗ್ರೆಸ್ ಬೆಂಬಲಿತ 5 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಒಟ್ಟು 14 ಮಂದಿ ನಾಮ ಪತ್ರ ಸಲ್ಲಿಸಿದ್ದಾರೆ.