ಅರಂತೋಡು -ಅಂಗಡಿಮಜಲು ರಸ್ತೆ ಬದಿಯಲ್ಲಿರುವ ಕೆರೆಯೊಂದು ಆಪಾಯಕ್ಕೆ ಆಹ್ವಾನ ನೀಡುವಂತಿದೆ.
ಅರಂತೋಡು- ಅಂಗಡಿಮಜಲು ರಸ್ತೆಯ ಎರಡು ಬದಿ ಕೆರೆಗಳು ಇದ್ದು ಇದಕ್ಕೆ ಯಾವುದೇ ತಡೆ ಬೇಲಿ ಇಲ್ಲದೆ ಇರುವುದರಿಂದ ವಾಹನ ಸೈಡ್ ಕೊಡುವ ಸಂದರ್ಭದಲ್ಲಿ ಆಯಾ ತಪ್ಪಿ ಕೆರೆಗೆ ಬಿದ್ದು ಜೀವಹಾನಿಯಾಗುವ ಸಂಭವವಿದೆ.
ಜನಪ್ರತಿನಿಧಿಗಳು ಈ ಕಡೆ ಗಮನ ಹರಿಸಿ ಸಂಭಾವ್ಯ ಅಪಘಾತವನ್ನು ತಪ್ಪಿಸಬಹುದಾಗಿದೆ.