ಮಾಪಳಡ್ಕ ಮಖಾಂ ಉರೂಸ್ ಸಮಾರೋಪ

0

ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಮಾಪಲಡ್ಕ ಮಖಾಂ ಶರೀಫ‌ನಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿರುವ ಮಹಾತ್ಮರ ಸ್ಮರಣಾರ್ಥ ನಡೆಸಿಕೊಂಡು ಬರುತ್ತಿರುವ 3 ದಿನಗಳ ಊರೂಸ್ ಕಾರ್ಯಕ್ರಮದ ಸಮಾರೋಪಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಸಮಸ್ತ ಕೇರಳ ಜಂಇಯ್ಯುತುಲ್ ಉಲಮಾ ಕಾರ್ಯದರ್ಶಿ ಹಿರಿಯ ಧಾರ್ಮಿಕ ವಿದ್ವಾಂಸ ಬದ್ರುಸ್ಸಾದಾತ್ ಅಸ್ಸಯ್ಯದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಸಮಾರೋಪ ಸಮಾರಂಭದಲ್ಲಿ ದುವಾಃ ಆಶಿರ್ವಚನ ನೀಡಿದರು. ಆಧುನಿಕ ಯುಗದಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಜನರು ಸಂಸ್ಕಾರಯುತ ಜೀವನ ನಡೆಸಲು ಅಸಡ್ಡೆ ತೋರುತ್ತಿರುವ ಕಾರಣ ಜೀವನದಲ್ಲಿ ಹಲವು ಬದಲಾವಣೆಗಳಿಗೆ ಮತ್ತು ಸಮಸ್ಯೆಗಳಿಗೆ ಕಾರಣವಾಗುತಿದೆ. ಆದುದರಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು
ಅಲ್ಲಾಹುವಿನ ಅನುಗ್ರಹ ಪಡೆಯಲು ಧರ್ಮಾಧಾರಿತ ಮತ್ತು ಸಂಸ್ಕಾರಯುತ ಬದುಕನ್ನು ನಡೆಸಬೇಕಾಗಿದೆ ಎಂದು ಅವರು ಕರೆ ನೀಡಿದರು.


ಈ ಸಂದರ್ಭದಲ್ಲಿ ಮಾಪಳಡ್ಕ ದರ್ಸಿನಲ್ಲಿ ಕುರ್-ಆನ್ ಕಂಠ ಪಾಠ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಹಾಫಿಝ್ ಪದವಿ ಪ್ರದಾನ ಮಾಡಲಾಯಿತು.
ಜಮಾಅತ್ ಕಮಿಟಿ ಅಧ್ಯಕ್ಷ ಎ.ಬಿ ಅಶ್ರಫ್ ಸ‌ಅದಿ ಅಧ್ಯಕ್ಷತೆ ವಹಿಸಿದ್ದರು. ಮರ್ಕಜ್ ನಾಲೇಜ್ ಸಿಟಿ ಪ್ರಾಂಶುಪಾಲರಾದ ಇಬ್ರಾಹೀಂ ಸಖಾಫಿ ತಾತೂರು ಮುಖ್ಯ ಪ್ರಭಾಷಣ ಮಾಡಿದರು.


ಉರೂಸ್ ಮೌಲಿದ್ ಪಾರಾಯಣ, ಬುರ್ದಾ ಮಜ್ಲಿಸ್, ಖತಮುಲ್ ಕುರ್- ಆನ್ ಸಂಗಮ, ದಿಕ್ರ ದುಆ ಸಂಗಮ, ಮತ ಪ್ರವಚನ, ಹಾಫಿಝ್ ಬಿರುದು ದಾನ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಬಿಜೆಎಂ ಗೌರವಧ್ಯಕ್ಷ ಇಬ್ರಾಹಿಂ ಹಾಜಿ ಸಂಕೇಶ್, ಜಮಾಯತ್ ಕಾರ್ಯದರ್ಶಿ ಟಿ ಹೆಚ್ ಮಹಮ್ಮದ್, ಕೋಶಾಧಿಕಾರಿ ಹಸೈನಾರ್ ಬಿ ಹೆಚ್ ಉಪಾಧ್ಯಕ್ಷ ಹಸೈನಾರ್ ಧರ್ಮತನ್ನಿ,ಮಹಮ್ಮದ್ ಆಲಿ ಮುಸ್ಲಿಯಾರ್ ಅಡ್ಕ,ಬಿಜೆಎಂ ಖತೀಬರಾದ ಅಶ್ರಫ್ ನಹಿಮಿ, ಉದ್ಯಮಿ ಅಬ್ದುಲ್‌ ರಹಿಮಾನ್ ಸಂಕೇಶ್ ಮೊದಲಾದವರು ಉಪಸ್ಥಿತರಿದ್ದರು.


ಮಾಪಳಡ್ಕ ಮುದರಿಸ್ ಹಾಫಿಳ್ ಅಬ್ದುಲ್‌ ಸಲಾಂ ನಿಝಾಮಿ ಸ್ವಾಗತಿಸಿದರು. ಉರೂಸ್ ನ ಎಲ್ಲಾ ದಿನಗಳಲ್ಲಿ ಆಗಮಿಸಿ ಎಲ್ಲರಿಗೂ ಅನ್ನದಾನ ವಿತರಣೆ ನಡೆಯಿತು. ದ್ರಿಕ್ಸ್ ಹಲ್ಕಾ ದಿನ ಹಾಗೂ ಉರೂಸ್ ಸಮಾರೋಪದಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ ತಬರ್ರುಕ್ ವಿತರಣೆ ನಡೆಯಿತು.