ಆಧ್ಯಾ ಅಂಬ್ರೋಟಿ ಹಾಗೂ ಆರಾಧ್ಯ ಅಂಬ್ರೋಟಿಗೆ ಡಿಸ್ಟಿoಕ್ಷನ್
ಕರ್ನಾಟಕ ರಾಜ್ಯ ಡಾ. ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕು. ಆಧ್ಯಾ ಅಂಬ್ರೋಟಿ (89%) ಹಾಗೂ ಕು. ಆರಾಧ್ಯ ( 88%) ಡಿಸ್ಟಿo ಕ್ಷನ್ ಪಡೆದು ತೇರ್ಗಡೆ ಹೊಂದಿದ್ದಾರೆ.
ಇವರು ಮೂಲತಃ ಕೊಡಗು ಸಂಪಾಜೆ ಗ್ರಾಮದ ಕೊಯನಾಡಿನವರಾಗಿದ್ದು , ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವೀಂದ್ರ ಹಾಗು ಶ್ರೀಮತಿ ಅಶ್ವಿನಿ ದಂಪತಿಗಳ ಪುತ್ರಿಯಾಗಿದ್ದಾರೆ. ಅಲ್ಲದೆ ನಟರಾಜ ನೃತ್ಯ ನಿಕೇತನದ ನೃತ್ಯ ವಿದುಷಿ ಇಂದುಮತಿ ನಾಗೇಶ್ ಅವರ ಶಿಷ್ಯೆoದಿರಾಗಿದ್ದಾರೆ.