ಕೇರ್ಪಡ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

0

ಧಾರ್ಮಿಕ ಕಾರ್ಯಕ್ರಮಗಳು ಬದುಕಿಗೆ ದಾರಿದೀಪ- ಎಸ್.ಅಂಗಾರ

ಆತ್ಮ ಗೌರವದ ಉನ್ನತಿಗಾಗಿ ನಮ್ಮತನದ ಜಾಗೃತಿ ಅಗತ್ಯ- ಅವಿನಾಶ್ ಕೊಡೆಂಕಿರಿ

ಧಾರ್ಮಿಕ ಕಾರ್ಯಕ್ರಮಗಳು ಬದುಕಿಗೆ‌ ದಾರಿದೀಪ. ಭಕ್ತಿ ಭಾವದ ಸಮರ್ಪಣೆ ಮತ್ತು ನಿಷ್ಠೆಯ ಧಾರ್ಮಿಕ ಕಾರ್ಯಕ್ರಮಗಳಿಂದ ಬದುಕಿನಲ್ಲಿ ನೆಮ್ಮದಿ ದೊರೆಯಲು ಸಾಧ್ಯ ಎಂದು ಮಾಜಿ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಕೇರ್ಪಡ‌ ಶ್ರೀ‌ ಮಹಿಷ ಮರ್ದಿನಿ ದೇವಸ್ಥಾನದದ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಜ.5ರಂದು ಹಮ್ಮಿಕೊಂಡ ಧಾರ್ಮಿಕ‌ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಜನರ ಭಕ್ತಿ ಮತ್ತು ಧರ್ಮ‌ ಜಾಗೃತಿಯ ಪರಿಣಾಮದಿಂದ ಕೇರ್ಪಡದಲ್ಲಿ ಇಷ್ಟು ದೊಡ್ಡ ಪರಿವರ್ತನೆ‌ ಸಾಧ್ಯವಾಗಿದೆ ಎಂದು ಅವರು ಹೇಳಿದರು.


‘ಭಾರತ ಕಂಡ‌ ಮಹಾನ್ ಸನ್ಯಾಸಿ ಸ್ವಾಮಿ ವಿವೇಕಾನಂದ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ನರಿಮೊಗರು ಸರಸ್ವತಿ ವಿದ್ಯಾಲಯದ ಅಧ್ಯಕ್ಷ ಅವಿನಾಶ್ ಕೊಡೆಂಕಿರಿ ಮಾತನಾಡಿ’ ಆತ್ಮದ ಹುಡುಕಾಟ ಮತ್ತು ನಮ್ಮತನದ ಜಾಗೃತಿಯ ಕೊರತೆ ನಮ್ಮಲ್ಲಿದೆ. ಆದುದರಿಂದ ಆತ್ಮ ಗೌರವದ ಉನ್ನತಿಗಾಗಿ ನಮ್ಮತನದ ಜಾಗೃತಿ ಅಗತ್ಯ ಎಂದು ಹೇಳಿದರು. ‌ಸ್ವಾಮಿ ವಿವೇಕಾನಂದರು ಸೇರಿದಂತೆ ಹಲವಾರು ಸಂತರ ನಿರಂತರ ಶ್ರಮದಿಂದ ರಾಷ್ಟ್ರದ ಆತ್ಮಚೈತನ್ಯದ ಪುನರುತ್ಥಾನ ಆಗಿದೆ ಎಂದು ಅವರು ಹೇಳಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಕಾಂಚೋಡು ಮಂಜುನಾಥ ಸ್ವಾಮಿ ದೇವಸ್ಥಾನದ ಪರಮೇಶ್ವರಯ್ಯ ಹೆಗ್ಗಡೆ, ಸುಳ್ಯ ಅಟಲ್‌ಜಿ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯ ರಾಕೇಶ್ ರೈ ಕೆಡಂಜಿ, ಸ್ವಾಗತ ಸಮಿತಿ ಸದಸ್ಯ ಪ್ರಸನ್ನ ಕೆ, ಎಣ್ಮೂರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅನೂಪ್ ಕುಮಾರ್ ಆಳ್ವ ಕೆ, ಕೇರ್ಪಡ ಗೌಡ ಮನೆತನದ ಚೆನ್ನಪ್ಪ ಗೌಡ ಕೇರ್ಪಡ, ವ್ಯವಸ್ಥಾಪನ ಸಮಿತಿ ಸದಸ್ಯ ನಾಗೇಶ್ ಆಳ್ವ ಕಟ್ಟಬಿಡು, ವ್ಯವಸ್ಥಾಪನ ಸಮಿತಿ ಸದಸ್ಯ ರಘುನಾಥ ಎಂಜಿರ್, ಸೇವಾ ಸಮಿತಿ ಸದಸ್ಯರಾದ ವಸಂತ ಕುಕ್ಕಯ್ಯ ಕೊಡಿ ಧರ್ಮಪಾಲ ಅನ್ನೋವು, ದಿನೇಶ್ ಪಜಿಂಬಿಲ ವೇದಿಕೆಯಲ್ಲಿದ್ದರು. ತ್ರಿಶಾ ಕೇರ್ಪಡ ಪ್ರಾರ್ಥಿಸಿದರು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೂಪ್ ಆಳ್ವ ವಂದಿಸಿದರು.ಪ್ರದೀಪ್ ರೈ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.