ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಸಮಾಜಮುಖಿ ಕಾರ್ಯ

0

ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸಮಾಜ ಸೇವಾ ಕಾರ್ಯಕ್ರಮಗಳನ್ನು ಜ.5 ರಂದು ನಡೆಸಲಾಯಿತು.

ಕುಮಾರಧಾರ ಮತ್ತು ಆಸುಪಾಸಿನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು. ಅಲ್ಲದೆ ಒಂದಷ್ಟು ಸೇವಕರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭೋಜನಶಾಲೆಯಲ್ಲಿ ಬಡಿಸುವ ಸೇವಾ ಕಾರ್ಯದಲ್ಲಿ ತೊಡಗಿಕೊಂಡರು . ಅಲ್ಲದೆ ಸ್ಥಳೀಯವಾಗಿ ಬೀಡಾಡಿ ಎತ್ತುವೊಂದು ಕೆಲ ದಿನಗಳಿಂದ ಹಗ್ಗದಲ್ಲಿ ಸಿಕ್ಕಿಹಾಕಿಕೊಂಡು ಅಸಹಾಯಕತೆಯಲ್ಲಿದ್ದದ್ದನ್ನು ಮನಗಂಡು ಅದನ್ನು ಹಗ್ಗದಿಂದ ಬಿಡಿಸಲಾಯಿತು.