ರೈತ ಯುವಕ ಮಂಡಲ ಏನೆಕಲ್ಲು ಸಹಯೋಗದೊಂದಿಗೆ
ಪರಮಲೆ ಸಹೋದರರು ಇವರ ಆಶ್ರಯದಲ್ಲಿ, ಆಯ್ದ 8 ತಂಡಗಳ ಲೀಗ್ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ “ಶಂಖಶ್ರಿ ಟ್ರೋಫಿ” ಮಾ. 9 ಏನೆಕಲ್ಲಿನಲ್ಲಿ ನಡೆಯಲಿದೆ.
ಏನೆಕಲ್ಲಿನ ಅರ್ಪಣಾ ಕ್ರೀಡಾಂಗಣದಲ್ಲಿ ಪಂದ್ಯಾಟ ಮಧ್ಯಾಹ್ನ 1 ಗಂಟೆಯಿಂದ ನಡೆಯಲಿದೆ.
ಪಂದ್ಯಾಟದಲ್ಲಿ ವಿಜೇತ ಪ್ರಥಮ ,ದ್ವಿತೀಯ, ತೃತೀಯ ಚತುರ್ಥ ರಿಗೆ ನಗದು ಬಹುಮಾನ ಹಾಗೂ ಶಂಖಶ್ರೀ ಟ್ರೋಫಿ ದೊರೆಯಲಿದ್ದು, ಜೊತೆಗೆ ಲೀಗ್ ನಿರ್ಗಮಿತ ತಂಡಗಳಿಗೂ ಶಾಶ್ವತ ಫಲಕ ಮತ್ತು ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಪಂದ್ಯಾಟದ ಆಯೋಜಕರಲ್ಲಿ ಓರ್ವರಾದ ಜೀವಿತ್ ಪರಮಲೆ ತಿಳಿಸಿದ್ದಾರೆ.