ಸಹಕಾರ ಭಾರತಿ ಯಿಂದ 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರುಗಳ ಆಯ್ಕೆಗೆ ಮತದಾನ ಜ.16 ರಂದು ನಡೆಯಲಿದೆ.
ಸಹಕಾರ ಭಾರತಿ ಯಿಂದ 12 ಸ್ಥಾನಕ್ಕೆ ನಾಮಪತ್ರ ಜ.6 ರಂದು ಸಲ್ಲಿಸಿದ್ದಾರೆ.
ಸಾಮಾನ್ಯ ಸ್ಥಾನಕ್ಕೆ ಚಂದ್ರಶೇಖರ ಶಾಸ್ತ್ರಿ, ಚಿನ್ನಪ್ಪ ಚೊಟ್ಟೆಮಜಲು, ಸುಬ್ರಹ್ಮಣ್ಯ ಕುಳ, ಸದಾನಂದ ಕಾರ್ಜ, ವಾಸುದೇವ ಕೆರೆಕ್ಕೊಡಿ , ಅರುಣ್ ರೈ,ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಮುದರ ಐವತ್ತೊಕ್ಲು ,ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ವಾಚಣ್ಣ ಕೆರೆಮೂಲೆ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನಕ್ಕೆ ಲಿಗೋಧರ ಆಚಾರ್ಯ ,ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನಕ್ಕೆ ತಿಮ್ಮಪ್ಪ ಗೌಡ ಕೂತ್ಕುಂಜ ,ಮಹಿಳಾ ಮೀಸಲು ಸ್ಥಾನಕ್ಕೆ ವನಿತಾ ಅತ್ಯಡ್ಕ, ಬೇಬಿ ಭಾಸ್ಕರ ಕಾರ್ಜ, ನಾಮಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಬಾಜಪ ಪಕ್ಷದ ಪ್ರಮುಖರಾದ ಡಾ.ರಾಮಯ್ಯ ಭಟ್, ಶಿವರಾಮಯ್ಯ ಕರ್ಮಾಜೆ, ಭಾಸ್ಕರ ಪಂಡಿ, ಐವತ್ತೊಕ್ಲು,ಕೂತ್ಕುಂಜ,ಬಳ್ಪ,ಕೇನ್ಯ ಶಕ್ತಿ ಕೇಂದ್ರದ ಅಧ್ಯಕ್ಷರು,ಬೂತ್ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷ ರು, ಸದಸ್ಯರು,ಹಿಂದೂ ಜಾಗರಣ ವೇದಿಕೆ ಪಂಜ ದ ಸದಸ್ಯರು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.