ದಫ್ ತಂಡಗಳಿಂದ ಆಕರ್ಷಕ ರ‍್ಯಾಲಿ
ಟಿ.ಎಂ. ಶಹೀದ್ ಹಾಗೂ ಡಾ.ಉಮ್ಮರ್ ಬೀಜದಕಟ್ಟೆಯವರಿಗೆ ಸನ್ಮಾನ
ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಶನ್ ಪೇರಡ್ಕ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳು ಗೂನಡ್ಕ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ, ಸಿ. ಕೆ. ಲೆಜೆಂಡ್ಸ್ ಕಲ್ಲುಗುಂಡಿ, ತಾಲೂಕು ಮುಸ್ಲೀಂ ಫೆಡರೇಷನ್ ಹಾಗು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಳ್ಯ ತಾಲೂಕು ಮಟ್ಟದ ಹಾಗೂ ರಾಜ್ಯ ರಾಜ್ಯಮಟ್ಟದ ಸಂಪಾಜೆ ದಫ್ ಸ್ಪರ್ಧೆ ಗೂನಡ್ಕದ ಸಜ್ಜನ ಸಭಾ ಭವನದಲ್ಲಿ ನಡೆಯಿತು.
ದಪ್ ಸ್ಪರ್ಧೆಗೂ ಮುನ್ನ ಗೂನಡ್ಕದಲ್ಲಿ ಆಕರ್ಷಕ ದಫ್ ರ‍್ಯಾಲಿ ನಡೆಯಿತು.
ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ರ‍್ಯಾಲಿಗೆ ಚಾಲನೆ ನೀಡಿದರು. ಪೇರಡ್ಕ ಜುಮ್ಮಾ ಮಸೀದಿಯ ಖತೀಬರಾದ ನಈಂ ಫೈಝಿ ದುವಾಃ ನೆರವೇರಿಸಿದರು.
ರ‍್ಯಾಲಿ ಸಜ್ಜನ ಸಭಾಭವನಕ್ಕೆ ಆಗಮಿಸಿದ ಬಳಿ ದಫ್ ಸ್ಪರ್ಧೆ ಆರಂಭಗೊಂಡಿತು. ಆರಂಭದಲ್ಲಿ ತಾಲೂಕು ಮಟ್ಟದ ಸ್ಪರ್ಧೆ ಬಳಿಕ ರಾಜ್ಯಮಟ್ಟದ ದಫ್ ಸ್ಪರ್ಧೆ ನಡೆಯಿತು. ಗೂನಡ್ಕ
ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಉಮ್ಮರ್ ಬೀಜದಕಟ್ಟೆ ಸ್ಪರ್ಧೆಯನ್ನು ಉದ್ಘಾಟಿಸಿದರು.
ಕಲ್ಲುಗುಂಡಿ ಬಿ.ಜೆ.ಎಂ ಖತೀಬರಾದ ನಾಸಿರ್ ಫೈಝಿ ದುವಾಃ ನೆರವೇರಿಸಿದರು.
ಪೇರಡ್ಕ ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಶನ್‌ನ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ತೆಕ್ಕಿಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಉಮ್ಮರ್ ಬೀಜದಕಟ್ಟೆ ಅವರನ್ನು ಸನ್ಮಾನಿಸಲಾಯಿತು.ಸಂಪಾಜೆ ಗ್ರಾ.ಪಂ.ಉಪಾಧ್ಯಕ್ಷ ಎಸ್.ಕೆ.ಹನೀಫ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ದ.ಕ.ಉಡುಪಿ ದಫ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಪ್ರಮುಖರಾದ ಆದಂ ಹಾಜಿ ಕಮ್ಮಾಡಿ, ಅಬ್ದುಲ್ ಲತೀಫ್ ಹರ್ಲಡ್ಕ, ತಾಜ್ ಮಹಮ್ಮದ್ ಸಂಪಾಜೆ, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ನ.ಪಂ.ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್,
ಅಶ್ರಫ್ ಗುಂಡಿ, ಸುಳ್ಯ ತಾಲೂಕು ಮುಸ್ಲೀಂ ಒಕ್ಕೂಟದ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ನಗರ ಪಂಚಾಯತ್ ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ನಾಮನಿರ್ದೇಶಿತ ಸದಸ್ಯ ಸಿದ್ದಿಕ್ ಕೊಕ್ಕೊ, ಅಬ್ದುಲ್ ಕಲಾಂ, ಕಲಂದರ್ ಎಲಿಮಲೆ, ರಶೀದ್ ಜಟ್ಟಿಪಳ್ಳ, ಉನೈಸ್ ಪೆರಾಜೆ, ಉಮ್ಮರ್ ತಾಜ್, ಅಬೂಬಕ್ಕರ್ ಹಾಜಿ ಮಂಗಳ, ಎಸ್.ಆಲಿ ಹಾಜಿ, ಅಶ್ರಫ್ ಸಂಟ್ಯಾರ್, ಅಬ್ಬಾಸ್ ಎಂ.ಎಂ ಚಟ್ಟೆಕಲ್ಲು, ಶಾಫಿ ಪ್ರಗತಿ, ರಫೀಕ್ ಕೆ.ಎಂ, ರಫೀಕ್ ಕರಾವಳಿ, ಹಾಜಿ ಇಬ್ರಾಹಿಂ ಮೈಲುಕಲ್ಲು, ಸಿರಾಜುದ್ದೀನ್, ಇರ್ಷಾದ್ ಬದ್ರಿಯಾ, ಕೆ.ಎ.ರಝಾಕ್, ಕಿಫಾಯುತ್ತಿಲ್ಲ, ಸಿ.ಕೆ.ಆರಿಸ್, ನಝೀರ್ ಶಾಂತಿನಗರ, ಅಬ್ದುಲ್ ರಹಿಮಾನ್ ಎಸ್.ಪಿ ಮತ್ತಿತರರು ಉಪಸ್ಥಿತರಿದ್ದರು.