ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಸಂತ ಸಂಭ್ರಮ ಕಾರ್ಯಕ್ರಮ

0

ಜನರ ಸಹಕಾರ,ಕೊಡುಗೆಗಳಿಂದ ಶಾಲೆಯ ಅಭಿವೃದ್ಧಿ : ಭಾಗೀರಥಿ ಮುರುಳ್ಯ

ಬೆಳ್ಳಾರೆ ಕೆಪಿಎಸ್ ಶಿಕ್ಷಣ ಸಂಸ್ಥೆಗಳ ವಸಂತ ಸಂಭ್ರಮ ಕಾರ್ಯಕ್ರಮವು ಜ.03 ರಂದು ಕುಂಜಾಡಿ ನಾರಾಯಣ ರೈ ವೇದಿಕೆಯಲ್ಲಿ ನಡೆಯಿತು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.


ಶಾಸಕಿ ಭಾಗೀರಥಿ ಮುರುಳ್ಯ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಬೆಳ್ಳಾರೆ ಕೆಪಿಎಸ್ ನಲ್ಲಿ ವಸಂತ ಸಂಭ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.ಹಲವು ಜನರ ಕೊಡುಗೆಗಳಿಂದ ಶಿಕ್ಷಣ ಸಂಸ್ಥೆ ಇಂದು ಬೆಳಗುತ್ತಿದೆ.ಇಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ವಿವಿಧ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಒಸಾಟ್ ಸಂಸ್ಥೆಯಿಂದ ನಿರ್ಮಾಣವಾದ ಕೊಠಡಿಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಲಿ ಎಲ್ಲಾ ವ್ಯವಸ್ಥೆಗಳನ್ನು ಒಸಾಟ್ ಸಂಸ್ಥೆ ನೀಡಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.


ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರನ್ನು ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಒಸಾಟ್ ಸಂಸ್ಥೆಯ ಅಮೇರಿಕ ಅಧ್ಯಕ್ಷ ಬಿ.ವಿ.ಜಗದೀಶ,ಭಾರತೀಯ ಅಧ್ಯಕ್ಷ ವಾದಿರಾಜ ಭಟ್,ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ರಾವ್ ,ಪ್ರಾಜೆಕ್ಟ್ ಮೆನೇಜರ್ ಕಿಶೋರ್ ಕುಮಾರ್ ಅವರನ್ನು ಗೌರವಿಸಲಾಯಿತು.


ವಸಂತ ಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಒಸಾಟ್ ಸಂಸ್ಥೆಯ ಚೆಯರ್ ಮೆನ್ ಜಗದೀಶ್,ವಸಂತ ಸಂಭ್ರಮ ಸಮಿತಿ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಚಾಲಕ ಎಸ್.ಎನ್.ಮನ್ಮಥ, ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್ .ರೈ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್, ರೈ, ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು,ಚಂದ್ರಶೇಖರ ಪನ್ನೆ,ವಿಠಲದಾಸ್ ಎನ್.ಎಸ್.ಡಿ,ವಸಂತ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ, ಶಾಲಾ ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಶ್ರೀನಾಥ ರೈ ಬಾಳಿಲ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ವಿದ್ಯಾರ್ಥಿ ನಾಯಕರಾದ ಧನುಷ್,ಅಮೃತ್ ಎಚ್.ಕೆ,ದೀಕ್ಷಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಉಪಪ್ರಾಂಶುಪಾಲರಾದ ಶ್ರೀಮತಿ ಉಮಾಕುಮಾರಿ ಸ್ವಾಗತಿಸಿ, ವಿದ್ಯಾರ್ಥಿಗಳು ಪ್ರಾರ್ಥಿಸಿ,ಪ್ರಾಂಶುಪಾಲ ಜನಾರ್ಧನ ಕೆ.ಎನ್.ವರದಿ ಮಂಡಿಸಿದರು.
ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ.ವಂದಿಸಿದರು.