ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ: ಕಾಂಗ್ರೆಸ್ ಬೆಂಬಲಿತ 5 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ನಿರ್ದೇಶಕರುಗಳ ಆಯ್ಕೆಗೆ ಮತದಾನ ಜ.16 ರಂದು ನಡೆಯಲಿದೆ.
ಜ.4 ರಿಂದ ಜ.8 ರ ತನಕ ಬೆಳಿಗ್ಗೆ ಗಂಟೆ 11 ರಿಂದ ಮಧ್ಯಾಹ್ನ ಗಂಟೆ 1 ತನಕ ನಾಮ ಪತ್ರ ಸಲ್ಲಿಕೆಗೆ ಅವಕಾಶ ಇರುತ್ತದೆ.

ಜ.4 ರಂದು 5 ಮಂದಿ ನಾಮ ಪತ್ರ ಸಲ್ಲಿಸಿದ್ದಾರೆ.ಸಾಮಾನ್ಯ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಲಕ್ಷ್ಮಣ ಗೌಡ ಬೊಳ್ಳಾಜೆ, ಗಂಗಾಧರ ಗುಂಡಡ್ಕ, ಕೇಶವ ಕುದ್ವ, ಜಯರಾಮ ಕಂಬಳ, ,ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನಕ್ಕೆ ರಫೀಕ್ ಐವತ್ತೊಕ್ಲು ನಾಮ ಪತ್ರ ಸಲ್ಲಿಸಿದ್ದಾರೆ.