ಸುಳ್ಯದ ಪಿ.ಎಲ್.ಡಿ. ಬ್ಯಾಂಕ್ ಆಡಳಿತ ಮಂಡಳಿಗೆ ಜ.12ರಂದು ಚುನಾವಣೆ

0

ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಇಂದು 10 ನಾಮಪತ್ರ ಸಲ್ಲಿಕೆ

ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ಆಡಳಿತ ಮಂಡಳಿಗೆ ಜ.12 ರಂದು ಚುನಾವಣೆ ನಡೆಯಲಿದ್ದು ಜ.1 ರಂದು 10 ನಾಮಪತ್ರ ಸಲ್ಲಿಸಿದರು ದಾಗಿ ತಿಳಿದು ಬಂದಿದೆ.
ಈಗಾಗಲೇ ಒಟ್ಟು 14 ನಾಮಪತ್ರ ಸಲ್ಲಿಸಿದಂತಾಗಿದೆ.

ಜ.1 ರಂದು ಪ.ಜಾ.ಮೀಸಲು ಕ್ಷೇತ್ರದಿಂದ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ 10 ನಾಮಪತ್ರ ಸಲ್ಲಿಕೆಯಾಗಿದೆ.

ಸಾಲಗಾರರಲ್ಲದ ಕ್ಷೇತ್ರದಿಂದ ಅವಿನಾಶ್ ಡಿ.ಕೆ, ಮಹಿಳಾ ಮೀಸಲು ಕ್ಷೇತ್ರದಲ್ಲಿ ಸವಿತಾ ಕೆ.ಜೆ, ಸಾಮಾನ್ಯ ಕ್ಷೇತ್ರದಲ್ಲಿ ಜಯರಾಮ ರೈ ಕೆ, ಅಚ್ಚುತ ಕೆ, ವಿಜಯ ಪಿ, ಕಾವೇರಿ ಕೆ, ಹಿ.ವರ್ಗ ಎ ಸೋಮನಾಥ ಕೆ, ಹಿ.ವರ್ಗ ಬಿ ಮಹಾವೀರ ಜಿ, ಸಾಮಾನ್ಯ ಕ್ಷೇತ್ರದಿಂದ ಸುಬ್ರಹ್ಮಣ್ಯ ಭಟ್ ಕೆ ರವರು 2 ನಾಮಪತ್ರ ಸಲ್ಲಿಸಿರುತ್ತಾರೆ.