ಜ.5 ರಿಂದ ನಾಮಪತ್ರ ಸಲ್ಲಿಕೆ ಆರಂಭ
ಮುರುಳ್ಯ – ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಜನವರಿ 17ರಂದು ಚುನಾವಣೆ ನಡೆಯಲಿದ್ದು, ಜ.5ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ.
ಜ.5ರಿಂದ ಜ.9 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಜ.10 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ಜ.11ರಂದು ನಾಮಪತ್ರಗಳ ಹಿಂಪಡೆಯಲು ಕೊನೆಯ ದಿನ.ಅಂದೇ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ನಡೆಯಲಿದೆ. ಜ.13ರಂದು ಸಿಂಧುತ್ವ ಹೊಂದಿರುವ ಅಭ್ಯರ್ಥಿ ಗಳ ಪಟ್ಟಿ ಚಿಹ್ನೆಯೊಂದಿಗೆ ಪ್ರಕಟಿಸಲಾಗುತ್ತದೆ.ಜ.17ರಂದು ಮತದಾನ ನಡೆದು ಸಂಜೆ ಫಲಿತಾಂಶ ಘೋಷಣೆಯಾಗಲಿದೆ.ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಅಧಿಕಾರಿಯಾದ ಶೋಭಾ ಎನ್.ಎಸ್.ಕಾರ್ಯನಿರ್ವಹಿಸುತ್ತಿದ್ದಾರೆ.