ಮುಖ್ಯೋಪಾಧ್ಯಾಯಿನಿ ತಾರಾಮತಿ ಕಜ್ಜೋಡಿ ನಿವೃತ್ತಿ

0

ಬಾಳುಗೋಡು ಹಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾಯಿನಿ ತಾರಾಮತಿ ಕಜ್ಜೋಡಿ ಡಿ.31 ರಂದು ಸೇವಾ ನಿವೃತ್ತಿ ಹೊಂದಿದರು.

ಮೂಲತಹ ದೇಲಂಪಾಡಿಯವರು ಕುಂದಾಪುರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು, ಬಳಿಕದ ಶಿಕ್ಷಣವನ್ನು ಕಾರ್ಕಳದಲ್ಲಿ ಪಡೆದರು. ರೋಸಾಮಿಸ್ತಿಕ ತರಬೇತಿ ಸಂಸ್ಥೆ ಗುರುಪುರ ಇಲ್ಲಿ ಟಿ.ಸಿ.ಎಚ್ ಮಾಡಿದರು. 1991 ರಲ್ಲಿ ಹರಿಹರ ಪಲ್ಲತಡ್ಕದ ತೇಜಕುಮಾರ್ ಅವರನ್ನು ಮದುವೆಯಾದರು. 1994 ರಲ್ಲಿ ಕರಂಗಲ್ಲು ಸ.ಕಿ.ಪ್ರಾ.ಶಾಲೆಗೆ ಸರ್ಕಾರಿ ಶಿಕ್ಷಕಿಯಾಗಿ ನಿಯುಕ್ತಿಗೊಂಡರು. ಅಲ್ಲಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ 11 ವರ್ಷಗಳ ಕಾಲ ಹರಿಹರ ವಲಯ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಇವರು ಬಳಿಕ ಸ.ಉ.ಹಿ.ಪ್ರಾ.ಶಾಲೆ ಕಲ್ಮಕಾರು ಇಲ್ಲಿ 6 ವರ್ಷ, ಹರಿಹರ ಹಿ.ಪ್ರಾ.ಶಾಲೆಯಲ್ಲಿ 4 ವರ್ಷ ಸೇವೆ ಸಲ್ಲಿಸಿದ್ದಾರೆ. ಎರಡು ವರ್ಷಗಳ ಹಿಂದೆ ಬಾಳುಗೋಡು ಹಿ.ಪ್ರಾ.ಶಾಲೆಗೆ ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಸ.ಕಿ.ಪ್ರಾ.ಶಾಲೆ ಹಿರಿಯಡ್ಕ ಮತ್ತು ಸ.ಕಿ.ಪ್ರಾ.ಶಾಲೆ ಗೋವಿಂದ ನಗರ ಇಲ್ಲಿನ ಮುಖ್ಯೋಪಾಧ್ಯಾಯಿನಿಯಾಗಿ ಪ್ರಭಾರ ಸೇವೆಯನ್ನು ಸಲ್ಲಿಸುತ್ತಿದ್ದರು. ಒಟ್ಟಾಗಿ 30 ವರ್ಷಗಳ ಶಿಕ್ಷಕ ವೃತ್ತಿಯನ್ನು ಮಾಡಿದ್ದು, ಸೇವಾ ಅವಧಿಯಲ್ಲಿ ಕರಂಗಲ್ಲಿನಲ್ಲಿನಲ್ಲಿದ್ದಾಗ ವನಶ್ರೀ ಯುವತಿ ಮಂಡಳಿಯನ್ನು ಕರಂಗಲ್ಲಿನಲ್ಲಿ ಸ್ಥಾಪಿಸಿದ್ದರು. ಐದು ಭಾರಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಇವರ ಪುತ್ರ ಓರ್ವ ಪ್ರಜ್ವಲ್ ಸ್ವಂತ ಉದ್ದಿಮೆಯಲ್ಲಿ ತೊಡಗಿದ್ದಾರೆ. ಮತ್ತೋರ್ವ ಪುತ್ರ ಉಜ್ವಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯಲ್ಲಿ ಖಾಸಗಿ ನೆಲೆಯಲ್ಲಿ ಉದ್ಯೋಗದಲ್ಲಿದ್ದಾರೆ.