ಬೆಳ್ಳಾರೆ ಕಾಮಧೇನು ಕ್ರೆಡಿಟ್ ಸೌಹಾರ್ದ ಸಹಕಾರಿ ಇದರ ರಜತ ಮಹೋತ್ಸವ ವರ್ಷ ಸೌಹಾರ್ದ ಸಹಕಾರಿ ದಿನಾಚರಣೆಯನ್ನು ಜ. 1ರಂದು ಕಚೇರಿಯ ಮುಂಭಾಗದಲ್ಲಿ ಆಚರಿಸಲಾಯಿತು.
ಸ್ಥಾಪಕ ಅಧ್ಯಕ್ಷ ಮಾಧವ ಗೌಡ ಎಂ.ರವರು ಧ್ವಜಾರೋಹಣಗೈದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ಮ್ಯಾನೇಜರ್ ನವೀನ್,
ಕಾಮಧೇನು ಕ್ರೆಡಿಟ್ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಮಹಾಬಲ ಗೌಡ ಕಲ್ಲೋಣಿ, ನಿರ್ದೇಶಕರಾದ ಕೆ ವೆಂಕಟಪ್ಪ ಗೌಡ ಮತ್ತು ಎನ್ ಎಸ್ ವೆಂಕಪ್ಪಗೌಡ ಮತ್ತು ಸಿಬ್ಬಂದಿ ವರ್ಗ ಮತ್ತು ಸಹಕಾರಿಯ ಸದಸ್ಯರು ಭಾಗವಹಿಸಿದ್ದರು. ಮಾಧವ ಗೌಡ ಕಾಮಧೇನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ನಿರ್ದೇಶಕ ವೆಂಕಪ್ಪಗೌಡ ವಂದಿಸಿದರು.