ಕಾಮಧೇನು ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಬೆಳ್ಳಾರೆ ಇದರ ಸಹಭಾಗಿತ್ವದಲ್ಲಿ, ಕಾಮಧೇನು ಸ್ವಸಹಾಯ ವಿಕಾಸ ಯೋಜನೆಯ ಪ್ರಾಯೋಜಕತ್ವದಲ್ಲಿ ಕೆಯ್ಯೂರು ಗ್ರಾಮದ ಚೆನ್ನಪ್ಪ ಗೌಡ ಶ್ರೀದೇವಿ ಕೃಪಾ ನಿಲಯದಲ್ಲಿ ಶ್ರೀನಿಧಿ ಸ್ವಸಹಾಯ ಸಂಘವನ್ನು ರಚಿಸಲಾಯಿತು.
ರಾಮಣ್ಣ ಗೌಡ ಜ್ಯೋತಿ ನಿಲಯ ಇವರು ದೀಪ ಬೆಳಗಿಸುವ ಮೂಲಕ ಸಂಘವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾಮಧೇನು ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಬೆಳ್ಳಾರೆ ಇದರ ಸ್ಥಾಪಕ ಅಧ್ಯಕ್ಷ ಮಾದವ ಗೌಡ ಕಾಮಧೇನು, ಉಪಾಧ್ಯಕ್ಷ ಮಹಾಬಲ ಗೌಡ ಕಲ್ಲೋಣಿ, ಉಮಾಕಾಂತ್ ಬೈಲಾಡಿ, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯ ವಿಜಯ್ ತಣಂಗಳ, ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಮೇಲ್ವಿಚಾರಕ ಕೆ. ಚಿನ್ನಪ್ಪ ಗೌಡ ಸ್ವಾಗತಿಸಿ, ಕಾಮಧೇನು ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ವೆಂಕಪ್ಪ ಗೌಡ ಕೆಯ್ಯೂರು ವಂದಿಸಿದರು.